About the Author

ಲೇಖಕ ವಿ. ರಂಗನಾಥ್ ಅವರು 26 ವರ್ಷ ಕಾಲ ಸರಕಾರಿ ಸೇವೆಯಲ್ಲಿದ್ದು, ತಹಸೀಲ್ದಾರರಾಗಿ ಈಗ ನಿವೃತ್ತರು. ಬಿ.ಎಸ್ಸಿ, ಎಲ್.ಎಲ್.ಬಿ, ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮೋ ಇನ್ ಮಾಸ್ ಕಮ್ಯುನಿಕೇಶನ್ ಜರ್ನಲಿಸಂ, ಎಂ. ಎ ಕನ್ನಡ, ಪಿ.ಹೆಚ್.ಡಿ(ಕೆ.ಎಸ್. ಓ.ಯು), ಎಂ.ಎ(ಇತಿಹಾಸ), ಪಿ.ಹೆಚ್.ಡಿ(ಐನ್ ಸ್ಟೀನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ, ಯುಎಸ್‌ಎ), ಮೈಸೂರು ದಸರಾ ಉತ್ಸವದ ವಿಶೇಷ ಕರ್ತವ್ಯಾಧಿಕಾರಿಯಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ದಸರಾ ಬಗ್ಗೆ ಹಲವಾರು ವರ್ಷ ಆಕಾಶವಾಣಿಯಲ್ಲಿ ದೂರದರ್ಶನ ವಾಹಿನಿಗಳಲ್ಲಿ ವೀಕ್ಷಕರಿಗೆ ವಿವರಣೆ ನೀಡಿದ್ದಾರೆ. ಭದ್ರಾವತಿ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಸುಮಾರು 100 ಚಿಂತನ ಕಾರ್ಯಕ್ರಮ ಹಾಗೂ ರೂಪಕಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ.

ಕೃತಿಗಳು: ಶೃಂಗೇರಿ(ಮಕ್ಕಳ ಪುಸ್ತಕ), ಕವಿಗಳು ಕಂಡ ದಸರಾ, ರಂಗಚಿಂತನ, ಸಾರಸ್ವತ ಲೋಕದ ಅಮೂಲ್ಯ ನಿಧಿ ರಸಿಕ ಪುತ್ತಿಗೆ (ಜೀವನ ಚರಿತ್ರೆ)

ವಿ. ರಂಗನಾಥ್