About the Author

ವಸಂತ ಕವಲಿಯವರು (ಜನನ: 12-10-1931) ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ, ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಬೂರ್ಜ್ವಾ ಟ್ರಾಜೆಡಿ ’ವಿಷಯವಾಗಿ ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದರು.

ಕವಿ. ನಾಟಕಕಾರರು. ನಿರ್ದೇಶಕರು, ಬೆಂಗಳೂರು ಹಾಗೂ ಭದ್ರಾವತಿ ಆಕಾಶವಾಣಿಯಲ್ಲಿ ಹಲವು ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಮುಂಬೈಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಅಲಂಕಾರ, ಕಣ್ವ ಕೇಶನ, ಘನ ಆನಂದ, ತಾನಸೇನ, ಮದನಲಾಲ್ ದಿಂಗ್ರ-ಹೀಗೆ ಮಕ್ಕಳಿಗಾಗಿ ನಾಟಕಗಳನ್ನು ರಚಿಸಿದರು. ಭಾಸನ ಸ್ವಪ್ನವಾಸವದತ್ತ ನಾಟಕ ಕನಸಿನ ರಾಣಿ, ಎನ್ನ ಮುದ್ದಿನ ಮುದ್ರಣ-ನಾಟಕಗಳು. ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ-ಸಂಕೀರ್ಣ ಕೃತಿ. ರಾಗ-ತಾನ-ಸೇನ ಎಂಬುದು ಅವರ ಯುರೋಪ ಪ್ರವಾಸದ ಕಥನ. ಏಕಾಂತದ ಸುಖಕ್ಕೆ ಲೋಕಾಂತವದೇಕೆ? ನಂಬರು-ನೆಚ್ಚರು, ಖಂಡವಿದೆಕೋ ಮಾಂಸವಿದೆಕೋ-ಇಂತಹ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರು 17-11-1988 ರಂದು ನಿಧನರಾದರು.

ವಸಂತ ಕವಲಿ

(12 Oct 1931-17 Nov 1988)