About the Author

ವಿಜ್ಞಾನ, ಆರ್ಯುವೇದ ಕುರಿತು ಹಲವು ಕೃತಿಗಳನ್ನು ರಚಿಸಿರುವ ಲೇಖಕಿ ವಸುಂಧರಾ ಎಂ. 1957 ಮೇ 20ರಂದು ಜನಿಸಿದರು. ಮಂಡ್ಯ ಇವರ ಹುಟ್ಟೂರು. ತಾಯಿ ಸಾವಿತ್ರಮ್ಮ. ತಂದೆ ಮರಿಯಪ್ಪ. ವಿಜ್ಞಾನ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಆರ್ಯುವೇದ, ಗಿಡಮೂಲಿಕೆಗಳ ಕುರಿತು ಅಧ್ಯಯನದಲ್ಲಿ ನಿರತರಾಗಿದ್ದ ಇವರು ಇದಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಸೌಂದರ್ಯವರ್ಧಕ ಗಿಡಮೂಲಿಕೆಗಳು, ಮನೆಯಂಗಳದಲ್ಲಿ ಔಷಧಿ, ಔಷಧಿ ಮತ್ತು ಸುಗಮಧ ಸಸ್ಯಗಳ ಕೈಪಿಡಿ, ಔಷಧಿ ಬೆಳೆಗಳ ಬೇಸಾಯ ಕ್ರಮಗಳು, ಔಷಧಿ ಬೆಳೆಗಳ ತಾಂತ್ರಿಕ ತರಬೇತಿ ಕೈಪಿಡಿ, ಔಷಧಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು ಮತ್ತು ತಾಂತ್ರಿಕತೆ, ಪಂಚಾಲಿ, ಔಷಧಿ ಬೆಳೆಗಳ ಉಪಯುಕ್ತತೆ ಮತ್ತು ತಾಂತ್ರಿಕತೆಯ ಕೈಪಿಡಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 

ಇವರು ರಚಿಸಿದಿರುವ ‘ಮನೆ ಅಂಗಳದಲ್ಲಿ ಔಷಧೀಯ ವನ’ ಕೃತಿಗೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬಹುಮಾನ, ಪ್ರತಿಭಾವಂತ ವಿಜ್ಞಾನಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯುಎಸ್‌ಎಸ್‌ ಅಸೋಸಿಯೇಷನ್‌ನಿಂದ ಅಸಾಧಾರಣ ಮಹಿಳಾ ವಿಜ್ಞಾನಿ ಪ್ರಶಸ್ತಿ ಲಭಿಸಿದೆ. 

ವಸುಂಧರಾ ಎಂ

(20 May 1957)