About the Author

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿಯವರಾದ ವೀರಭದ್ರ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ವಸ್ತು ಮತ್ತು ಭಾಷೆಯಲ್ಲಿ ಹೊಸತನ ತಂದ ವೀರಭದ್ರ ಅವರು ತೆಲುಗು ಮತ್ತು ಇತರ ಭಾಷೆಯ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ.

ನೀಲಿ ನೀರಿನ ಮೇಲೆ, ಈ ಭೂಮಿ ಈ ಆಕಾಶ, ಮರೆಯವರು, ಬಾವಿಯಿಂದ ಬೇಲಿಗೆ, ಕನ್ನಡಿ ನೋಡಿದ ನಾಯಿ (ಕಥಾ ಸಂಕಲನಗಳು), ಅನಾಥ ಪಕ್ಷಿಯ ಕಲರವ (ಸಮಗ್ರ ಕಥೆಗಳು), ದಶಕದ ಕಥೆಗಳು (ಸಂಪಾದಿತ ಸಂಕಲನ), ಸುತ್ತೂರ ಸುರಧೇನು (ಕಾದಂಬರಿ), ನನ್ನೆಲೆ ಕಥೆ ಬರೆಯೋಲ್ಲವೆ, ಮರಳಿನ ದಿನ್ನೆಗಳು (ಅನುವಾದಿತ ಕಥೆಗಳು), ಚರಿತ್ರಹೀನ, ದೇವದಾಸ, ನಾನು ಮಾಧವಿ, ಮನೆ ಸುಟ್ಟಿತು, ರಾಮನ ಬುದ್ಧಿವಂತಿಕೆ, ಕತ್ತಲಲ್ಲಿ ಬೆಳಕು, ವಿಶ್ವನಾಥ, ಅನಾಥ ಪಕ್ಷಿ ಮೈದಾನ, ಅಲ್ಪಜೀವಿ (ಅನುವಾದಿತ ಕಾದಂಬರಿಗಳು), ಐದು ಮತ್ತು ಹತ್ತು, ಶಾಕುಂತಲಾವಲೋಕನ, ನಿಸರ್ಗ, ಶಾಪ, ಗ್ರಂಥಾಲಯಾಂತರಂಗ, ಆಧುನಿಕ ಕನ್ನಡ ಕಾವ್ಯ (ಸಂಪಾದಿತ) ಪ್ರಕಟಿತ ಕೃತಿಗಳು.

ಅರವತ್ತರ ದಶಕದಲ್ಲಿ ನಿರಂಜನ, ತರಾಸು, ಅನಕೃ ಮಾದರಿಯಲ್ಲಿ ಬರೆಯಲು ಆರಂಭಿಸಿದರು. ನವ್ಯಕತೆಗಳ ಹೆಜ್ಜೆಜಾಡಿನಲ್ಲಿ ನಡೆದು ಇಮೇಜಿಸ್ಟ್, ಸರ್ ರಿಯಲಿಸ್ಟ್ ಮುಂತಾದ ವಾಸ್ತವ ಗ್ರಹಿಕೆಯ ಹೊಸ ಮಾದರಿಯ ಕಥಾರಚನೆಗೆ ತೊಡಗಿದರು. ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ವೀರಭದ್ರ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿದ್ದಾರೆ. ನೀಲಿ ನೀರಿನ ಮೇಲೆ, ಈ ಭೂಮಿ ಆ ಆಕಾಶ, ಮರೆಯವರು, ಬಾವಿಯಿಂದ ಬೇಲಿಗೆ, ಕನ್ನಡ ನೋಡಿದ ನಾಯಿ ಕಥಾ ಸಂಕಲನಗಳನ್ನು ಪ್ರಕಟಿಸಿರುವ ವೀರಭದ್ರ ಅವರು ತೆಲುಗಿನಿಂದ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ ‘ಅನಾಥ ಪಕ್ಷಿ’ ಹಾಗೂ ತೆಲುಗಿಗೆ ಅನುವಾದವಾಗಿದ್ದ ಶರಶ್ಚಂದ್ರರ ಬಂಗಾಳಿ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅನಾಥ ಪಕ್ಷಿಯ ಕಲರವ ಅವರ ಸಮಗ್ರ ಕತೆಗಳ ಸಂಕಲನ.

ವೀರಭದ್ರ

(10 Jul 1937)