About the Author

ಲೇಖಕ ವೀರಶೆಟ್ಟಿ ಬಿ. ಗಾರಂಪಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ (ಜನನ: 01-05-1985) ಸಾಲೇ ಬೀರನಹಳ್ಳಿಯವರು. ತಂದೆ ಬಸವರಾಜ, ತಾಯಿ ಶೇಕಮ್ಮ. ಎಂ.ಎ. (ಇತಿಹಾಸ) ಪದವೀಧರರು. ಚಿಂಚೋಳಿ ತಾಲೂಕಿನ ಸ್ವಾತಂತ್ಯ್ರ ಮತ್ತು ಏಕೀಕರಣ ಹೋರಾಟ’ ವಿಷಯವಾಗಿ ಎಂ.ಫಿಲ್ ಮತ್ತು ‘ಬೀದರ ಜಿಲ್ಲೆಯ ಶರಣರ ಸ್ಮಾರಕಗಳು’ ವಿಷಯವಾಗಿ ಪಿಎಚ್.ಡಿ. ಪದವೀಧರರು. ಪುರಾತತ್ವ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. 

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕರಾಗಿ (2014) ವೃತ್ತಿ ಜೀವನ ಆರಂಭಿಸಿ, ಸದ್ಯ ಹಿರಿಯ ಸಹಾಯಕ ನಿರ್ದೇಶಕರಾಗಿದ್ದಾರೆ. ,

ಕೃತಿಗಳು: ಬೀದರ ಜಿಲ್ಲೆಯ ಶರಣ ಸ್ಮಾರಕಗಳು, Unsung Freedom Struggle , ಆದಿಲ್ ಶಾಹಿ ಕಾಲದ ಕರ್ನಾಟಕ: ಬಹುಸಂಸ್ಕೃತೀಯ ಅನುಸಂಧಾನ (ಸಂಪಾದಿತ ಕೃತಿ-ಸಹ ಲೇಖಕರಾಗಿ), ಪಾವಸೆಗಲ್ಲಿನ ಪಥಿಕ ಶಿವಸ್ವಾಮಿ ಚೀನಕೇರಿ (ಜೀವನ ಚರಿತ್ರೆ)   

ವೀರಶೆಟ್ಟಿ ಬಿ ಗಾರಂಪಳ್ಳಿ

(01 May 1985)