About the Author

ಬರಹಗಾರ ವಿರೇಶ ನಾಯಕ.ಗದಗ್ ಜಿಲ್ಲೆ ಗಜೇಂದ್ರಗಡ ತಾಲೂಕು ಬೆಣಚಮಟ್ಟಿ ಗ್ರಾಮದವರು. ಪ್ರಾಥಮಿಕ  ಶಿಕ್ಷಣವನ್ನು ಹುಟ್ಟುರಾದ ಬೆಣಚಮಟ್ಟಿಯಲ್ಲಿ ಪಡೆದು, ನಂತರ ಬಿ.ಎಸ್‌.ಸಿ ಪದವಿಯನ್ನು ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯ, ನರೇಗಲ್‌ನಲ್ಲಿ ಪೂರೈಸಿದ್ದಾರೆ. ಎಂ.ಎಸ್‌.ಸಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ, ಹಾಗೂ ಪಿಜಿ  ಡಿಪ್ಲೋಮಾ (ಸೆಲ್ಯೂಲರ್ ಅಂಡ್ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್) ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.

ಹವ್ಯಾಸಗಳು : ಕವಿತೆ, ವೈಜ್ಞಾನಿಕ ಲೇಖನ ಬರವಣಿಗೆ.

ರಾಜ್ಯದ ಯುವ ಕವಿಗಳ ಸಂಕಲನಗಳಲ್ಲಿ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ, ಪಂಜು, ಅವಧಿ, ಕೆಂಡಸಂಪಿಗೆ ಮುಂತಾದ ವೆಬ್ ಮ್ಯಾಗಜಿನ್‌ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ರಾಜ್ಯದೆಲ್ಲೆಡೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಿಕ್ಷಣ, ಸಾಹಿತ್ಯ, ವಿಜ್ಞಾನ ಕುರಿತು ಅರಿವು ಮೂಡಿಸುವ ಜೊತೆಗೆ ಪ್ರೇರಣಾದಾಯಕ ಭಾಷಣಗಳನ್ನು ಮಾಡುತ್ತ ಬರುತ್ತಿದ್ದಾರೆ. 

ಪ್ರಶಸ್ತಿಗಳು: ರಾಜ್ಯ ಮಟ್ಟದ ಬೆಸ್ಟ್ ಆ್ಯಂಕರ್ ಅವಾರ್ಡ್, ಗಣರಾಜ್ಯೋತ್ಸವ ಪುರಸ್ಕಾರ.
 

ವಿರೇಶ ನಾಯಕ