About the Author

ಲೇಖಕ ವೆಂಕಟಗಿರಿ ದಳವಾಯಿ ಮೂಲತಃ ಬಳ್ಳಾರಿಯವರು. ಎಂ.ಎ, ಎಂ.ಫಿಲ್, ಹಾಗೂ  ಪಿ.ಎಚ್.ಡಿ ಪದವೀಧರರು. ರಂಗಭೂಮಿ ಹಾಗೂ ಬರಹಗಳ ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಹಂಪಿಯ ಕನ್ನಡ ವಿ.ವಿ.ಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು.  ಪಿ.ಎಚ್.ಡಿ ಹಾಗೂ ಎಂ.ಫಿ.ಎಲ್ ಮಾರ್ಗದರ್ಶಕರು.

ಕೃತಿಗಳು: ಕಪ್ಪು ವ್ಯಾಕರಣ, ಇಂದು ಹೇಳಲೆಬಾರದು, ನಾನು ನೀನು ಆನು, ಅಪ್ರಮಾಣ,ಮೇಲೊಂದು ಗರುಡ. ಸಂಪಾದಿತ ಕೃತಿಗಳು: ಕಪ್ಪು ಕಾಲಿ ಕಡಗ, ಡಾಬಾಳಾ ಸಾಹೇಬ್ ಲೋಕಪುರ ಕಥನ ಸಂವಾದ, ಅನಿಕೇತನ ಕನ್ನಡ ಸಾಹಿತ್ಯ ಅಕಾಡೆಮಿ ಸಾಹಿತ್ಯ . ವಿಮರ್ಶಾ ದಾರಿಯಲ್ಲಿ, ಕಾವ್ಯವೆಂದರೆ ಹೊಸ ಮನುಷ್ಯನ ಹುಡುಕಾಟ-ಕವಿ ಸತ್ಯಾನಂದ ಪಾತ್ರೋಟರ ಸಂದರ್ಶನ, ವಾಲ್ಮೀಕಿ ಎಂಬ ಮಹಾವೃಕ್ಷ, ಅಲ್ಲಮ್ಮನನ್ನು ಅರಿಯುವ ದಾರಿ ಇತ್ಯಾದಿ.ಲೇಖನಗಳನ್ನು ಬರೆದಿದ್ದಾರೆ. 

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ (1998) ಯುವ ಕವಿ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ- 2018, ಗುಲ್ಬರ್ಗಾ ವಿಶ್ವವಿದ್ಯಾಲಯ ರಾಜೋತ್ಸವ ಪ್ರಶಸ್ತಿ -2018.

 

ವೆಂಕಟಗಿರಿ ದಳವಾಯಿ

(21 Jul 1969)