ಅಪ್ರಮಾಣ

Author : ವೆಂಕಟಗಿರಿ ದಳವಾಯಿ

Pages 113

₹ 2017.00




Year of Publication: 2017
Published by: ಖುತು ಪ್ರಕಾಶನ
Address: #7-5-148/4, ಜವಾಹರ ನಗರ ರಾಯಚೂರು-584103

Synopsys

ಲೇಖಕ ಪ್ರೊ. ವೆಂಕಟಗಿರಿ ದಳವಾಯಿ ಅವರ ’ ಅಪ್ರಮಾಣ’ ಕೃತಿಯು ಭಿನ್ನವಾದ ವೈಚಾರಿಕ ಬರಹಗಳನ್ನು ಒಳಗೊಂಡ ಸಂಕಲನ. ಒಟ್ಟು 19 ಬಿಡಿ ಲೇಖನಗಳಿವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಸ್. ಸಿರಾಜ್ ಅಹಮದ್ ಅವರು, ಈಗಾಗಲೇ ಸ್ಥಾಪಿತವಾದ ಅಭಿಪ್ರಾಯಗಳನ್ನು ತನಗೆ ಲಭ್ಯವಿರುವ ಹಲವು ಕ್ಷೇತ್ರಗಳ ಒಳನೋಟgL ಮೂಲಕ ವಿಸ್ತರಿಸುತ್ತ ಸಮಗ್ರವಾದ ದೃಷ್ಟಿಕೋನವೊಂದನ್ನು ಬೆಳೆಸಲು ನೋಡುವ ಪ್ರಯತ್ನ ಇಲ್ಲಿದೆ. ತಿಳಿಯಾಗಿ ಹೇಳುವುದರಿಂದ ದಳವಾಯಿಯವರ ಗದ್ಯಕ್ಕೆ ವಿಶಿಷ್ಟ ಪಾರದರ್ಶಕ ಗುಣವೊಂದು ಪ್ರಾಪ್ತವಾಗಿದೆ. ಹಾಗೆ ನೋಡಿದರೆ, ಇಲ್ಲಿನ ಹಲವಾರು ಲೇಖನಗಳನ್ನು ಸಂಶೋಧನೆ-ವಿಚಾರ ಸಂಕೀರ್ಣಗಳಂತಹ ಅಕಾಡೆಮಿಕ್ ಅಗತ್ಯಗಳಿಗಾಗಿ ಬರೆದಿದ್ದರೂ ಸಾಮಾನ್ಯವಾಗಿ ಇಂತಹ ಬರಹಗಳಲ್ಲಿರುವ ಜಡತ್ವ ಆಳವಾದ ಅಧ್ಯಯನವಿಲ್ಲದೆ ಕೇವಲ ಹೇಳಿಕೆಗಳ ಮೂಲಕ ಬೆಳೆಸುವ ಅಪ್ರಬುದ್ಧವಾದ ಸರಣೆಗಳನ್ನು ಕಾಣಲು ಸಾಧ್ಯವಿಲ್ಲ. ಯಾವುದೇ ವಾದವನ್ನು ಬೆಳೆಸುವಾಗಲೂ ಸಹ ವಿಚಾರವೊಂದರ ಸಿದ್ಧ ಮಾದರಿಯನ್ನು ಟೊಂಕಕ್ಕೆ ಕಟ್ಟಿಕೊಂಡು ಅದಕ್ಕನುಗುಣವಾದ ಅಭಿಪ್ರಾಯಗಳ ಬೆನ್ನೇರಿ ಅವುಗಳನ್ನು ಸ್ಥಾಪಿಸಿಯೇ ತೀರುವ ಅಭಿಪ್ರಾಯ ಇರುವ ಶೈಲಿಯನ್ನು ದಳವಾಯಿಯವರು ರೂಢಿಸಿಕೊಂಡಿಲ್ಲ. ಬದಲಾಗಿ, ಹಲವು ಚಿಂತನೆಗಳು, ಶಿಸ್ತುಗಳು ಕ್ಷೇತ್ರಕಾರ್ಯದ ತಿಳಿವಳಿಕೆಗಳಿಂದ ರೂಪುಗೊಂಡ ವಿಸ್ತೃತವಾದ ವಿಶ್ಲೇಷಣಾ ಕ್ರಮವೊಂದರ ಮೂಲಕ ನಮ್ಮ ಅರಿವನ್ನು ವಿಸ್ತರಿಸುವ ಮಾದರಿಯಲ್ಲಿ ಬರೆದಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

 

About the Author

ವೆಂಕಟಗಿರಿ ದಳವಾಯಿ
(21 July 1969)

ಲೇಖಕ ವೆಂಕಟಗಿರಿ ದಳವಾಯಿ ಮೂಲತಃ ಬಳ್ಳಾರಿಯವರು. ಎಂ.ಎ, ಎಂ.ಫಿಲ್, ಹಾಗೂ  ಪಿ.ಎಚ್.ಡಿ ಪದವೀಧರರು. ರಂಗಭೂಮಿ ಹಾಗೂ ಬರಹಗಳ ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಹಂಪಿಯ ಕನ್ನಡ ವಿ.ವಿ.ಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು.  ಪಿ.ಎಚ್.ಡಿ ಹಾಗೂ ಎಂ.ಫಿ.ಎಲ್ ಮಾರ್ಗದರ್ಶಕರು. ಕೃತಿಗಳು: ಕಪ್ಪು ವ್ಯಾಕರಣ, ಇಂದು ಹೇಳಲೆಬಾರದು, ನಾನು ನೀನು ಆನು, ಅಪ್ರಮಾಣ,ಮೇಲೊಂದು ಗರುಡ. ಸಂಪಾದಿತ ಕೃತಿಗಳು: ಕಪ್ಪು ಕಾಲಿ ಕಡಗ, ಡಾಬಾಳಾ ಸಾಹೇಬ್ ಲೋಕಪುರ ಕಥನ ಸಂವಾದ, ಅನಿಕೇತನ ಕನ್ನಡ ಸಾಹಿತ್ಯ ಅಕಾಡೆಮಿ ಸಾಹಿತ್ಯ . ವಿಮರ್ಶಾ ದಾರಿಯಲ್ಲಿ, ಕಾವ್ಯವೆಂದರೆ ಹೊಸ ಮನುಷ್ಯನ ಹುಡುಕಾಟ-ಕವಿ ...

READ MORE

Related Books