About the Author

ಲೇಖಕ ವೆಂಕಟೇಶ್ ಈಡಿಗರ ಮೂಲತ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರಾಗಿದ್ದು,ಕಳೆದ ಹದಿನೈದುವರ್ಷಗಳಿಂದ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಸರಕಾರಿ ಪ್ರಢಶಾಲೆಯಲ್ಲಿ ರಂಗ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . 1994 ರಿಂದ ನಿರಂತರವಾಗಿ ಕಲೆ ಸಾಹಿತ್ಯ ಸಂಗೀತ ಹಾಗೂ ರಂಗಭೂಮಿಯ ಸೇವೆಯನ್ನು ಮಾಡಿಕೊಂಡು ಬಂದಿದ್ದು,ರಂಗಾಯಣˌ ನೀನಾಸಂ ಪರ್ಯಟನ (ಮಂಗಳೂರು ) ಹಾಗೂ ಶಿವ ಸಂಚಾರದಂಥ ರಂಗ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಹೊಂದಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಂಗಕುಸುಮ ಪ್ರಕಾಶನದೊಂದಿಗೆ ಪುಸ್ತಕ ಪ್ರಕಟಣೆಯನ್ನು ಮತ್ತು ರಂಗ ಕುಸುಮ ಕಲಾಕೇಂದ್ರದ ಮೂಲಕ ಕಲಾ ಸೇವೆಯನ್ನು ಕೈಗೊಂಡಿದ್ದು,ಕಳೆದ ಹದಿನೈದು ವರ್ಷಗಳಿಂದ ನಾಡಿನ ಮೂಲೆ ಮೂಲೆಯಲ್ಲಿ ಎಲೆಮರೆಯ ಕಾಯಿಯಂತೆ ನಾಡಿನ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿಯನ್ನೂ ನೀಡುತ್ತಿದ್ದಾರೆ.ಸಾಹಿತ್ಯದ ಮೂಲಕ ಸಾಮಾಜಿಕ ತಿಳುವಳಿಕೆಯನ್ನೂ ಮಾಡುತ್ತಿದ್ದು, ಈವರೆಗೆ 36 ಕೃತಿಗಳು ಲೋಕಾರ್ಪಣೆಗೊಂಡಿವೆ .

ಕೃತಿಗಳು: ನಳದಮಯಂತಿ ( ನಾಟಕ ), ಮಕ್ಕಳ ಮನೋವಿಲಾಸ (ಕಥಾ ಸಂಕಲನ), ಗಾದೆಯೊಳಗಣ ಜ್ಞಾನಗಂಟು , ರಂಗ ಬಿನ್ನಹ (ಲೇಖನ ಮಾಲೆ ), ಮನದಾಳದ ಮಾತು (ಕವನ ಸಂಕಲನ ), ಬೀತಮ(ನಾಟಕ ), ಯಮಪುರಿಯಿಂದ ( ನಾಟಕ ), ಶಿವಲೀಲಿಮೃತ ( ನಾಟಕ ), ಊರು ಬಿಟ್ಟವರು ( ನಾಟಕ ), ಜ್ಞಾನ ಫಲ ( ನಾಟಕ ), ಕಪ್ಪು ಹೊಳೆಯ ಕಲರವ ( ನಾಟಕ ), ಪರಕಾಯ ಪ್ರವೇಶ( ನಾಟಕ), ಹಲಗಲಿ ಬೇಡರು ( ನಾಟಕ ), ತ್ಯಾಗಮಹಿ ಗೌತಮ ( ನಾಟಕ ), ತೆನಾಲಿ ತಲೆ ( ನಾಟಕ ), ಕಾಮಿಡಿ ಸರ್ಕಲ್ ( ನಾಟಕ ), ಅರಿವಿನಂಗಳ (ವೈಚಾರಿಕ ಲೇಖನಗಳು ), ಸ್ಪೂರ್ತಿಗೆ ಸೆಲೆಯಾದವರು ( ಸಾಧರ ಪರಿಚಯ ಕೃತಿ ), ರಂಗ ಜಂಗಮರು ( ರಂಗ ಸಾಧಕರ ಪರಿಚಯ ), ಕವಿ — ಕಾವ್ಯ — ಅನುಸಂಧಾನ ( ಕವನ ಸಂಕಲನ ), ಕಾವ್ಯ ಸ್ಪಂದನಾ ( ಕವನ ಸಂಕಲನ ), ಮಹಾಶಕ್ತಿ ( ನಾಟಕ ), ಅತೃಪ್ತರು ( ಕಿರು ಕಾದಂಬರಿ ), ನಿರಾಪೇಕ್ಷೆ ( ಕಿರು ಕಾದಂಬರಿ ), ಚಪ್ಪಲಿ ರಾಜ( ನಾಟಕ ), ವಚನ — ಸಿಂಚನ ( ವಚನ ಕಟ್ಟು ), ಮಿಸ್ ಮಾಡ್ಕೋಬೇಡಿ ( ನಾಟಕ ), ಸ್ವಾಭಿಮಾನ ( ನಾಟಕ ) , ದೇಶಾಭಿಮಾನ ( ನಾಟಕ ) ಮನದಂಗಳ (ಕವನ ಸಂಕಲನ ) ಋಣಮುಕ್ತ ( ನಾಟಕ), ಕವಿ — ಕಾವ್ಯ — ಸಂಗಮ ( ಮುದ್ರಣ ಹಂತದಲ್ಲಿದೆ ), ಮಕ್ಕಳ ಭಾವ ಸಂಗಮ ( ಕಥಾ ಸಂಕಲನ ), ಕಾವ್ಯ ಕಥನ ( ಕಥಾ ಸಂಕಲನ), ಬೆನ್ನ ಹಿಂದಿನ ಬೆಳಕು ( ಲೇಖನ ಮಾಲೆ), ನಂಬಿಗೆಯ ಅಂಬಿಗ (ನಾಟಕ),ಮುಕ್ಕಣ್ಣನ ಮುಡಿಪು (ನಾಟಕ)

ಪ್ರಶಸ್ತಿಗಳು: ಬಸವ ಚೇತನ ಪ್ರಶಸ್ತಿ , ಕರ್ನಾಟಕ ಕಲಾರತ್ನ ಪ್ರಶಸ್ತಿ ,ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ,ಜವಾಹರ್ ಲಾಲ್ ಸದ್ಭಾವನ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ,ಸಾಹಿತ್ಯ ಸಾಮ್ರಾಟ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ದಕ್ಷ ಕಾರ್ಯರತ್ನ ಪ್ರಶಸ್ತಿ,ಜವಾಹರ್ ಲಾಲ್ ನೆಹರು ಪುರಸ್ಕಾರ, ಆದರ್ಶ ಶಿಕ್ಷಕ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ರಾಜ ವೀರ ಮದಕರಿನಾಯಕ ಪ್ರಶಸ್ತಿ, ಬ್ರಹ್ಮಶ್ರಿ ನಾರಾಯಣಗುರು ಪ್ರಶಸ್ತಿ,ಸ್ವಾಮಿ ವಿವೇಕಾನಂದ ಪ್ರಶಸ್ತಿ, ಹಲವು ಸನ್ಮಾನಗಳು, ವಾಗ್ದೇವಿಯ ವರಪುತ್ರ

ವೆಂಕಟೇಶ್ ಈಡಿಗರ