ಸಂಕ್ರಾಂತಿ ಸಂಪ್ರೀತಿ

Author : ವೆಂಕಟೇಶ್ ಈಡಿಗರ

Pages 86

₹ 80.00
Year of Publication: 2022
Published by: ಹೆಚ್ ಎಸ್ ಆರ್ ಎ ಪ್ರಕಾಶನ

Synopsys

ಲೇಖಕ ವೆಂಕಟೇಶ್ ಈಡಿಗರ ಅವರ ಕೃತಿ ಸಂಕ್ರಾಂತಿ ಸಂಪ್ರೀತಿ. ಸಂಪಾದಕರ ನುಡಿಗಳಲ್ಲಿ ಹೇಳಿರುವಂತೆ, ಜನವರಿ 16 ರಂದು ಸಂಕ್ರಾಂತಿ ಹಬ್ಬ ದ ವಿಶೇಷವಾಗಿ ಸಂಕ್ರಾಂತಿ ಸಂಪ್ರೀತಿ ಹೆಸರಿನಲ್ಲಿ ರಾಜ್ಯ ಮಟ್ಟದ ಆನ್ ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿತ್ತು. ಈ ಕವನ ವಾಚನ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸರಿ ಸುಮಾರು ಎಪ್ಪತ್ತೊಂದು ಕವಿಮನಸುಗಳು ಬಹಳ ಉತ್ಸುಕತೆಯಿಂದ ಭಾಗವಹಿಸಿ ಗೋಷ್ಠಿಯನ್ನು ಯಶಸ್ವಿಗೊಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಕವಿ ಜಯಕವಿ ಎಂದೇ ಹೆಸರು ಮಾಡಿರುವ ಮೈಸೂರಿನ ಡಾ. ಜಯಪ್ಪ ಹೊನ್ನಾಳಿ ಯವರು ವಹಿಸಿˌ ಕವಿಗಳಿಗೆ ಪರಿಣಾಮಕಾರಿ ಕವನ ರಚಿಸಲು ಉತ್ತಮ ಸಲಹೆಗಳನ್ನು ನೀಡಿದರು. ಭಾಗವಹಿಸಿದ ಕವಿಗಳೆಲ್ಲರು ತುಂಬಾ ಆನಂದಪಟ್ಟರು.ಇದರ ಸವಿ ನೆನಪಿಗಾಗಿ ಹಾಗೂ ಸಂಸ್ಥೆಯ ಸಕ್ರೀಯ ಕಾರ್ಯ ಚಟುವಟಿಕೆಗಳ ನಿರಂತರತೆಗಾಗಿ ಭಾಗವಹಿಸಿದ ಎಲ್ಲಾ ಕವಿಗಳ ಕವಗಳನ್ನು ಪುಸ್ತಕ (ಕವನ ಸಂಕಲನ)ರೂಪದಲ್ಲಿ ಹೊರ ತರಬೇಕೆಂದು ಯೋಚಿಸಿದೆವು. ಆ ಆಲೋಚನೆಯ ಫಲವಾಗಿ ಇಂದು ರಾಜ್ಯದ ಕವಿ ಮನಗಳ ಸಂಕ್ರಾಂತಿಯ ಭಾವ ಬಂಧನದ ಕ್ಷಣಗಳು ಹೊತ್ತಿಗೆ ಸ್ವರೂದಲ್ಲಿ ನಿಮ್ಮ ಮುಂದಿದೆ ಎಂಬುದಾಗಿ ಹೇಳಿದ್ದಾರೆ.

ರಾಣೇಬೆನ್ನೂರಿನ ಹಿರಿಯ ಸಾಹಿತಿಗಳು ಶಿವಾನಂದ ಸೊಂಡೂರು ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಮೈಸೂರು ಭಾಗದ ಕವಿಗಳು ಡಾ. ಜಯಪ್ಪ ಹೊನ್ನಾಳಿಯವರ ಮಾತುಗಳನ್ನೂ ಈ ಕೃತಿಯಲ್ಲಿ ನಮೂದಿಸಲಾಗಿದೆ.

About the Author

ವೆಂಕಟೇಶ್ ಈಡಿಗರ

ಲೇಖಕ ವೆಂಕಟೇಶ್ ಈಡಿಗರ ಮೂಲತ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರಾಗಿದ್ದು,ಕಳೆದ ಹದಿನೈದುವರ್ಷಗಳಿಂದ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಸರಕಾರಿ ಪ್ರಢಶಾಲೆಯಲ್ಲಿ ರಂಗ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . 1994 ರಿಂದ ನಿರಂತರವಾಗಿ ಕಲೆ ಸಾಹಿತ್ಯ ಸಂಗೀತ ಹಾಗೂ ರಂಗಭೂಮಿಯ ಸೇವೆಯನ್ನು ಮಾಡಿಕೊಂಡು ಬಂದಿದ್ದು,ರಂಗಾಯಣˌ ನೀನಾಸಂ ಪರ್ಯಟನ (ಮಂಗಳೂರು ) ಹಾಗೂ ಶಿವ ಸಂಚಾರದಂಥ ರಂಗ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಹೊಂದಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಂಗಕುಸುಮ ಪ್ರಕಾಶನದೊಂದಿಗೆ ಪುಸ್ತಕ ಪ್ರಕಟಣೆಯನ್ನು ಮತ್ತು ರಂಗ ಕುಸುಮ ಕಲಾಕೇಂದ್ರದ ಮೂಲಕ ಕಲಾ ಸೇವೆಯನ್ನು ...

READ MORE

Related Books