About the Author

’ವಿಡಂಬಾರಿ’ ಎಂಬ ಕಾವ್ಯನಾಮದಿಂದ ಬರೆಯವ ವಿಷ್ಣು ಗ. ಭಂಡಾರಿ ಜನಿಸಿದ್ದು 1935ರಲ್ಲಿ. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು. ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದೇ ಕಾವ್ಯನಾಮ ಆಯಿತು. ವಿಡಂಬಾರಿ ಅವರ ಬದುಕು ರೂಪಿಸಿದ್ದು ಅಂಕೋಲೆ ಮತ್ತು ಅಲ್ಲಿಯ ಸಮಾಜವಾದಿ ಸ್ನೇಹಿತರು. ಕವಿ ದಿನಕರ ದೇಸಾಯಿ ಅವರ ಪರಿಚಯದ ಜೊತೆಯಲ್ವಾಲಿಯೇ ವಿ.ಜೆ ನಾಯಕ, ಅಮ್ಮೆಂಬಳ ಆನಂದ, ಶಾಂತಾರಾಮ ನಾಯಕ, ವಿಷ್ಣು ನಾಯ್ಕ , ಶ್ಯಾಮ ಹುದ್ದಾರ ….ಹೀಗೆ ಹಲವರು ಸ್ನೇಹಿತರಿಂದ ವೈಚಾರಿಕತೆ ರೂಪುಗೊಂಡಿತು. 

’ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ಬಂದದ್ದು ಭಟ್ಕಳದ ಶಿರಾಲಿಯಲ್ಲಿ. ನಿವೃತ್ತಿ ಆಗುವವರೆಗೂ ಶಿರಾಲಿಯಲ್ಲಿಯೇ ಇದ್ದರು. ಅವರ ಬದುಕಿಗೆ ಹೊಸ ಚಾಲನೆ ನೀಡಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ. ಉತ್ತರ ಕನ್ನಡ ಸಂಘಟನೆ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಸಂಘಟನೆತಂತೆ ’ಚಿಂತನ’ ಕೆಲಸ ಮಾಡುತ್ತಿತ್ತು. ವಿಠಲ ಭಂಡಾರಿ ಮತ್ತು ಸಿ. ಆರ್. ಶ್ಯಾನಭಾಗರು ಅದರ ಜಿಲ್ಲಾ ಸಂಚಾಲಕರಾಗಿದ್ದರು. ’ಚಿಂತನ’ದ ಭಾಗವಾಗಿ ಶಿರಸಿಯಲ್ಲಿ ಒಂದು ಪುಸ್ತಕ ಮಳಿಗೆ ತೆರೆಯಲಾಗಿತ್ತು.  ನಿವೃತ್ತಿಯ ನಂತರ ಎಲ್ಲೋ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ’ವಿಡಂಬಾರಿ’ ಅವರನ್ನು ಪುಸ್ತಕದಂಗಡಿಯ ಮ್ಯಾನೇಜರ ಆಗಿ ನೇಮಕಗೊಂಡರು. ಸ್ವಂತ ಮನೆ ಇಲ್ಲದ ’ವಿಡಂಬಾರಿ’ ಅವರು ಶಿರಸಿಗೆ ಸ್ಥಳಾಂತರವಾದರು.

ಅಂದಿನಿಂದ ಪುಸ್ತಕಗಳೇ ಅವರ ದಿನಚರಿ. ಪ್ರತಿದಿನ ಶಿರಸಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸು ಹತ್ತಿ ಹತ್ತಿ ಭಾಷಣ ಮಾಡಿ ಸಾವಿರಾರು ಪುಸ್ತಕ ಮಾರತೊಡಗಿದರು. ಅಂಚೆಯಣ್ಣ ಪುಸ್ತಕದ ಅಜ್ಜನಾಗಿ ಬದಲಾದರು. ಸಾವಿರಾರು ಪುಸ್ತಕ ಮಾರಿ ಓದುವ ಸಂಸ್ಕೃತಿ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು.

ವಿಡಂಬಾರಿಯವರು ಈ ವರೆಗೆ 4 ಕವನ ಸಂಕಲನ ಈವರೆಗೆ ಪ್ರಕಟಿಸಿದ್ದಾರೆ. ‘ಒಗ್ಗರಣೆ’  (1981), ‘ಕವಳ’ (1986) ‘ಕುದಿ ಬಿಂದು’ (2004) ‘ವಿಡಂಬಾರಿ ಕಂಡಿದ್ದು’ (2010) ಚುಟುಕು ಸಂಕಲನ. ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ… ಹೀಗೆ 7 ಪುಸ್ತಕ ಪ್ರಕಟವಾಗಿವೆ. ಸುಮಾರು 3,000 ಚುಟುಕುಗಳು ಪ್ರಕಟಣೆಗೆ ಕಾದಿವೆ. ಸದ್ಯ ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು 2020 ಫೆಬ್ರುವರಿ 14ರಂದು ನಿಧನರಾದರು.

ವಿಡಂಬಾರಿ (ವಿಷ್ಣು ಜಿ. ಭಂಡಾರಿ)