About the Author

ವಿಜಯಭಾರತೀ ಎ.ಎಸ್ ಅವರು ಗಾಯಕಿ, ಕವಯತ್ರಿ, ಕತೆಗಾರ್ತಿ, ಲೇಖಕಿ. ದೇಶ ಸುತ್ತುವ ಕೋಶ ಓದುವ ಹವ್ಯಾಸವನ್ನು ಪೋಷಿಸುವ ಅಪರಿಮಿತ ಕನ್ನಡ ಪ್ರೇಮಿ. ಬಿಎಸ್ಸಿ ಪದವೀದರರಾದರೂ, ಸಾಹಿತ್ಯದೆಡೆಗಿನ ತುಡಿತ ನಿರಂತರ. ಹಾಗಾಗಿ ಕರ್ನಾಟಕ ಮುಕ್ತ ವಿವಿಯಿಂದ ಕನ್ನಡ ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಹಾಗೂ ಮೂರು ಚಿನ್ನದ ಪದಕಗಳನ್ನು ಪಡೆದ ಪ್ರತಿಭಾನ್ವಿತೆ. ಭಾರತೀಯ ಅಂಚೆ ಕಛೇರಿಯಲ್ಲಿ ಇಪ್ಪತ್ತೈದು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡ ನಂತರ ಸಣ್ಣಕಥೆ, ಕಿರು ಕಾದಂಬರಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವನಿತಾ, ಮಂಗಳಾ, ರಾಗಸಂಗಮ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಕಥೆ ಕಾದಂಬರಿಗಳು ಪ್ರಕಟವಾಗಿವೆ. ಕೃತಿಗಳು: ಪಯಣ(ಕಥಾ ಸಂಕಲನ)

ವಿಜಯಭಾರತೀ ಎ.ಎಸ್

Books by Author