About the Author

ವೀರೇಶ ಜಾಲಿಕಟ್ಟಿ ಕಾವ್ಯನಾಮದ ಈರಪ್ಪ ಬಸವರಾಜ ಜಾಲಿಕಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಂಡ್ಲೂರಿನವರು. ಬಿ. ಎ, ಕನ್ನಡದಲ್ಲಿ ಎಮ್.ಎ ವಿದ್ಯಾರ್ಹತೆಯನ್ನು ಹೊಂದಿರುವ ಅವರು ಡಿಪ್ಲೋಮಾ ಇನ್ ಕಂಪ್ಯೂಟರ್ ಅಫ್ಲಿಕೇಶನ್ಸ್ ಪಡೆದಿರುತ್ತಾರೆ. ಚಿತ್ರಕಲೆ, ಕವಿತೆ, ಲೇಖನಗಳನ್ನು ಬರೆಯುವುದು, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದು, ಕವಿಗೋಷ್ಠಿ, ವಿಚಾರಗೋಷ್ಠಿ ನಡೆಸುವುದು ಅವರ ಹವ್ಯಾಸ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಪರೇಟರ್ ಕಮ್ ಕ್ಲರ್ಕ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿರುತ್ತಾರೆ. ಧಾರವಾಡದ ಸ್ಪರ್ಧಾಸ್ಪೂರ್ತಿ ಕನ್ನಡ ಮಾಸಪತ್ರಿಕೆಯಲ್ಲಿ ನಾಲ್ಕು ವರ್ಷ ಸಂಪಾದಕೀಯ ಸಹಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಬೆಂಗಳೂರು ಆವೃತ್ತಿಯಲ್ಲಿ ಒಂದು ವರ್ಷಗಳ ಕಾಲ ವರದಿಗಾರ ಹಾಗೂ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ.

ಕೃತಿಗಳು : ನಿಸರ್ಗ ಸಗ್ಗ(ಕವನ ಸಂಕಲನ), ಹಣತೆ ಕುಣಿತ, ಸಿರಿಗನ್ನಡ ಗೀತ ವ್ಯಾಕರಣ. ಅಸತ್ಯ-ಅಶುದ್ಧ(ಸಂಪಾದಿತ ಕೃತಿ), ವಚನಗಳ ವಿವೇಚನೆ, ಉ‌ತ್ತಂಗಿ ಚನ್ನಪ್ಪನವರ ಹರಿಜನ ಸೇವೆ, ಭಾರತೀಯ ಕ್ರಿಸ್ತಾನುಭಾವಿಗಳು, ಅರವತ್ತು ವಸಂತಗಳ ಸೌರಭ.

ವೀರೇಶ ಜಾಲಿಕಟ್ಟಿ