ಭಾಷಣ ಬತ್ತಳಿಕೆ

Author : ವೀರೇಶ ಜಾಲಿಕಟ್ಟಿ

Pages 108

₹ 120.00




Year of Publication: 2022
Published by: ಬಿ.ಜಿ ಪ್ರಿಂಟರ್‍ಸ್
Address: ಧಾರವಾಡ
Phone: 9035627808

Synopsys

‘ಭಾಷಣ ಬತ್ತಳಿಕೆ’ ಕೃತಿಯು ಈರಪ್ಪ ಬಸವರಾಜ ಜಾಲಿಕಟ್ಟಿ ಸಂಪಾದಿತ ಗುಂಜಾಳರ ಸಮ್ಮೇಳನಾಧ್ಯಕ್ಷೀಯ ಭಾಷಣಗಳ ಸಂಗ್ರಹವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಹಿರಿಯ ಗ್ರಂಥಾಲಯ ತಜ್ಞ ಡಾ. ಎಸ್. ಆರ್. ಗುಂಜಾಳರಿಗೆ 25 ಜೂನ್ 2022ಕ್ಕೆ ತೊಂಬತ್ತು ವರ್ಷಗಳು ತುಂಬುತ್ತಿರುವ ಸುಸಂದರ್ಭದ ಸವಿನೆನಪಿಗಾಗಿ ಪುಸ್ತಕವೊಂದನ್ನು ಹೊರತರಬೇಕೆಂಬ ವಿಚಾರದಲ್ಲಿದ್ದು, ಆ ಕ್ಷಣ ನನಗೆ ಹೊಳೆದದ್ದು, ಗುಂಜಾಳ ಗುರುಗಳ ಭಾಷಣಗಳನ್ನೇ ಇಡಿಯಾಗಿ ಸಂಕಲಿಸಿ ಪ್ರಕಟಿಸಬೇಕೆಂಬ ವಿಚಾರ, ಈ ಕುರಿತು ಗುರುಗಳೊಂದಿಗೆ ಮಾತನಾಡಿದಾಗ ಅವರು ಸಂತೋಷದಿಂದ ಒಪ್ಪಿಗೆ ನೀಡಿದರು. ಈ ಕಾರ್ಯಕ್ಕೆ ಪೂರಕವಾಗಿ ಅವರ ಸಮ್ಮೇಳನಾಧ್ಯಕ್ಷೀಯ ಭಾಷಣಗಳನ್ನೆಲ್ಲ ಅನ್ವೇಷಿಸ ತೊಡಗಿದನು. ಕೆಲವು ಭಾಷಣಗಳ ಪಡಿಯಚ್ಚುಗಳು ದೊರೆತರೆ, ಉಳಿದ ಕೆಲವು ಭಾಷಣಗಳನ್ನು ಅವು ದೊರೆಯುವಲ್ಲಿಯೇ ಹೋಗಿ ಸಂಪಾದಿಸಿದೆ. ಇನ್ನು ಕೆಲವು ದೊರೆಯಲೇ ಇಲ್ಲ. ಹೀಗೆ ಲಭ್ಯವಾದಷ್ಟೇ ಭಾಷಣಗಳನ್ನು ಬೆರಳಚ್ಚಿಸಿ ಕೃತಿಯ ಸಂಕಲನ ಕಾರ್ಯ ಪೂರೈಸಿದೆ. ನಂತರ ಅಕ್ಷರ ರಕ್ಷಣೆಯ ಕೆಲಸ ಕೈಗೂಡುವುದೆಂತು ಎಂದು ವಿಚಾರಕ್ಕಿಳಿದಾಗ ನೆನಪಿಗೆ ಬಂದಿದ್ದು, ಗುಂಜಾಳರ ಆತ್ಮೀಯ ಶಿಷ್ಯರೊಬ್ಬರಲ್ಲಾದ ಡಾ. ಮತ್ತಯ್ಯ ಕೋಗನೂರಮಠ ಅವರು. ಇವರು ಹಿಂದೊಮ್ಮೆ ಧಾರವಾಡಕ್ಕೆ ಗುರುಗಳ ಭೇಟಿಗೆಂದು ಬಂದಾಗ, 'ಪೂಜ್ಯ ಗುರುಗಳ ಕರುಣೆಯ ಸಂಪನ್ನು ನಾನು ಅನುಭವಿಸಿದ್ದೇನೆ. ಗುಂಜಾಳ ಗುರುಗಳ ಸಾಹಿತ್ಯಕ ಕೆಲಸ ಏನೇ ಇದ್ದರೂ ಮಾಡೋಣ. ಭಾಷಣಗಳ ಸಂಪಾದನೆಯ ಕಾರ್ಯದಲ್ಲಿ ಸಾರಿಸಿದ ಗದುಗಿನ ತ್ವರಿತ ಮುದ್ರಣಾಲಯದ ಮಾಲೀಕರಾದ ಆಶೋಕ ಅವರು, ಬೆಳಗಾವಿಯ ಶರಣ ಸಾಹಿತಿ ಪ್ರಕಾಶ ಗಿರಿಮಲ್ಲನವರ, ಧಾರವಾಡದ ರಾಜಶ್ರೀ ಪಿಂಟರ್‌ನ ವೀರೇಶ ತಡಕೋಡ ಹಾಗೂ ಬೆಂಗಳೂರಿನ ದಾನವಕಾಶ ಎನ್, ತಿಮ್ಮನ್ನು ಅವರುಗಳೆಲ್ಲ ಸೂಕ್ತ ಸಮಯಕ್ಕೆ ಭಾಷಣಗಳನ್ನು ಒದಗಿಸಿಕೊಟ್ಟು ಸಂಕಲನ ಕಾರ್ಯಕ್ಕೆ ಹೆಗಲು ನೀಡಿದ್ದಾರೆ. ಹತ್ತಾರು ವರುಷಗಳ ಕಾಲ ಈ ಭಾಷಣಗಳನ್ನು ಶೃದ್ಧೆಯಿಂದ ಕೂಡಿಟ್ಟುಕೊಂಡು ನಿಗದಿತ ಸಮಯದಲ್ಲಿ ಈ ಕೃತಿಗೆ ಬೇಕಾಗುವ ಭಾಷಣಗಳನ್ನು ಒದಗಿಸಿಕೊಟ್ಟವರಿಗೂ ಹಾಗೂ ಕೃತಿಯ ಪುಟಗಳ ಸಿದ್ಧತೆಗೆ ಸಂಬಂಧಿಸಿದ ಕೆಲಸಗಳಲ್ಲಿ ನೆರವಾದ ಗೆಳೆಯ ವೀರೇಶ ಚಿಕ್ಕಮಠ ಅವರೆಲ್ಲರ ಸಹಕಾರವನ್ನು ಸ್ಮರಿಸುತ್ತೇನೆ. ಹಾಗೆಯೇ ಕೃತಿಯನ್ನು ಅಂದವಾಗಿ ಆಚ್ಚಿಸಿದ ಎಲ್ಲರಿಗೂ ನಾನು ಋಣಿ ಡಾ. ಗುಂಜಾಳ ಗುರುಗಳು ತಮ್ಮ ವಯೋಮಾನದ 9ನೆಯ ವರ್ಷವನ್ನು ಪ್ರವೇಶಿಸುವ ಶುಭಾವಸರದಲ್ಲಿ ಈ ಭಾಷಣ ಬತ್ತಳಿಕೆ' ಕೃತಿ ಪ್ರಕಟಗೊಳ್ಳುತ್ತಿದೆ. ಯಾವುದೇ ಸಾಹಿತ್ಯದ ಪ್ರಕಟಣೆಗೂ ಓದುಗರ ಒಲವೇ ನಿಜವಾದ ಬೆಂಬಲ, 'ಭಾಷಣ ಬತ್ತಳಿಕೆ' ಕೃತಿಯು ವಿವೇಚನಾರ್ಹ ಮೌಲಿಕ ವಿಷಯಗಳ ಭಾಷಣಗಳನ್ನು ಒಳಗೊಂಡಿದ್ದು, ಓದುಗರಲ್ಲಿ ವಚನ ಸಾಹಿತ್ಯದ ಪ್ರಜ್ಞೆಯನ್ನು ಉದ್ದೀಪಿಸುತ್ತದೆ. ಮುಖ್ಯವಾಗಿ ಹಸ್ತಪ್ರತಿ ಸಾಹಿತ್ಯ, ವಚನ ಸಾಹಿತ್ಯ ಬೆಳೆದು ಬಂದ ದಾರಿ ಮತ್ತು ಪ್ರಸ್ತುತ ಈ ಕ್ಷೇತ್ರದಲ್ಲಿ ಆಗಬೇಕಾದ ಕಾರ್ಯಗಳ ಕುರಿತಾಗಿ ಬೆಳಕು ಚೆಲ್ಲುತ್ತದೆ ಎಂದಿದೆ.

About the Author

ವೀರೇಶ ಜಾಲಿಕಟ್ಟಿ

ವೀರೇಶ ಜಾಲಿಕಟ್ಟಿ ಕಾವ್ಯನಾಮದ ಈರಪ್ಪ ಬಸವರಾಜ ಜಾಲಿಕಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಂಡ್ಲೂರಿನವರು. ಬಿ. ಎ, ಕನ್ನಡದಲ್ಲಿ ಎಮ್.ಎ ವಿದ್ಯಾರ್ಹತೆಯನ್ನು ಹೊಂದಿರುವ ಅವರು ಡಿಪ್ಲೋಮಾ ಇನ್ ಕಂಪ್ಯೂಟರ್ ಅಫ್ಲಿಕೇಶನ್ಸ್ ಪಡೆದಿರುತ್ತಾರೆ. ಚಿತ್ರಕಲೆ, ಕವಿತೆ, ಲೇಖನಗಳನ್ನು ಬರೆಯುವುದು, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದು, ಕವಿಗೋಷ್ಠಿ, ವಿಚಾರಗೋಷ್ಠಿ ನಡೆಸುವುದು ಅವರ ಹವ್ಯಾಸ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಪರೇಟರ್ ಕಮ್ ಕ್ಲರ್ಕ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿರುತ್ತಾರೆ. ಧಾರವಾಡದ ಸ್ಪರ್ಧಾಸ್ಪೂರ್ತಿ ಕನ್ನಡ ಮಾಸಪತ್ರಿಕೆಯಲ್ಲಿ ನಾಲ್ಕು ವರ್ಷ ಸಂಪಾದಕೀಯ ಸಹಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಸಂಯುಕ್ತ ಕರ್ನಾಟಕ ...

READ MORE

Related Books