About the Author

ಕನ್ನಡದ ಹಿರಿಯ ವಿಧ್ವಾಂಸ ಡಾ. ಯಲ್ಲಪ್ಪ ಕೆಕೆಪುರ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ದೇವಸಮುದ್ರ ಹೋಬಳಿಯ ಕೆರೆಕೊಂಡಾಪುರ ಗ್ರಾಮದ ಯಲ್ಲಪ್ಪ ಮತ್ತು ದುರುಗಮ್ಮ ದಂಪತಿಗಳಿಗೆ ಜನಿಸಿದರು. 1971ರಲ್ಲಿ ಪಬ್ಲಿಕ್‌ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಟಾಪರ್‌ ಆಗಿ ಮೆರಿಟ್‌ ಸ್ಕಾಲರ್‌ಶಿಪ್ ಪಡೆದರು. ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು 1980ರಲ್ಲಿ ತಮ್ಮ ಬಿ.ಎ ವಿದ್ಯಾಭ್ಯಾಸದಲ್ಲಿ ಕನ್ನಡ ಐಚ್ಚಿಕ ವಿಷಯದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ನಂತರ ಕನ್ನಡ ವಿಭಾಗದಲ್ಲಿ ಎಂ.ಎ. ಪದವಿ ಪಡೆದರು. 1982ರಲ್ಲಿ ಕೆಂಗೇರಿ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ಇವರು 1983ರಲ್ಲಿ ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಆಯ್ಕೆಯಾದರು. ಇವೆಲ್ಲದರ ಜೊತೆಗೆ ನಾಟಕ ನಿರ್ದೇಶನ, ಕಾರ್ಪೋರೇಷನ್‌ ಅಧಿಕಾರಿಯಾಗಿ ಸಾಕಷ್ಟು ಜನಮಣ್ಣನೆ ಗಳಿಸಿದ್ದಾರೆ. ಇವರು 100ಕ್ಕೂ ಮಿಕ್ಕಿ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರು ಅಖಿಲ ಭಾರತ ಸಾಹಿತ್ಯ ಸಾಂಸ್ಕೃತಿ ಪರಿಷತ್ತಿಗೆ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಪ್ರಶಸ್ತಿಗಳು: ಬೆಸ್ಟ್‌ ಡಿಪೋ ಮ್ಯಾನೇಜರ್‌, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ, ಕನ್ನಡ ಸೇವಾ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ, ಸಾಹಿತ್ಯ ಸಿಂಧು ಪ್ರಶಸ್ತಿ, ರಾಜ್ಯ ಕರ್ನಾಟಕ ಚೇತನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ.

ಕೃತಿಗಳು: ಸಾರಿಗೆಯಲ್ಲಿ ಎಂಕ, ಕಂಡಕ್ಟರನ ಸುತ್ತ ಹಬ್ಬಿದ ಹುತ್ತ, ರಾವಣರ ಮಧ್ಯೆ, ಮಾನ, ಟಾಪ್ ಟೆನ್ ಕಥೆಗಳು, ಕ್ರಾಂತಿ, ಸುತ್ತಲಿನ ಕಥೆಗಳು, ವೀರನ್ತೆ ವನ್ತೆ ದುರುಗವ್ವ, ಪತ್ತದಾರಿ, ಎದೆಗೆ ಬಿದ್ದ ಕತೆಗಳು, ಚಕ್ರ, ಗರಿ, ಆಯ್ದ ಕಥೆಗಳು, ನನ್ನಾತ್ಮಸಾಕ್ಷಿ, ಸಾಪ, ಪಂಚಮಿ, ಎದೆಯೊಳಗಿನ ಬೆಂಕಿ, ದಶಕಂಠ, ಕಥೆಗಾರ (ಕಥಾ ಸಂಕಲನ). ಕೆಂಪು ಬಸ್ಸಿನ ಕಪ್ಪು ಕವಿತೆಗಳು, ನಾ ನಗುತ್ತೇನೆ, ನನ್ನ ಮಾದರಿ, ನನ್ನೂರ ಹಾದಿಲಿ, ಊರು ಕೇರಿಯ ಪದ್ಯಗಳು, ಬಾಲ್ಯ, ಯಾನ, ಹಾಡಿವೆ ನನ್ನ ಎದೆಯಲ್ಲಿ, ವೇದಾಂತ ಚಿಂತಾಮಣಿ, ವೇದಾಂತ ಚಿಂತಾಮಣಿ, ಹಳ್ಳಿ, ಆಯ್ದ ಕವಿತೆಗಳು (ಕವನ ಸಂಕಲನ). ಸುಖದ ನೆಲೆ, ನೂರೊಂದು ವಿಸ್ಮಯಗಳು, ನೂರೊಂದು ಸೃಷ್ಟಿ ವೈಚಿತ್ರ್ಯಗಳು, ನೂರೊಂದು ಚುಕ್ಕಿಚಂದ್ರಮರು, ನೂರೊಂದು ಗಗನ ಕುಸುಮಗಳು, ನೂರೊಂದು ಗಿಲಿಗಿಲಿ ಕಥೆಗಳು, ನೂರೊಂದು ಸೋಜಿಗಗಳು, ನೂರೊಂದು ರತ್ನಗಳು, ನೂರೊಂದು ಮಾಣಿಕ್ಯಗಳು, ನೂರೊಂದು ಅಮೃತ ಫಲಗಳು, ಚಿಗುರು, ಕಾಡು ಹಣ್ಣುಗಳು, ಮಕ್ಕಳ ಕಥೆಗಾರ, 91 ಕತೆಗಳು, ನನ್ನಿ ಕಥೆಗಳು, ನೂರೊಂದು ಅದ್ಭುತಗಳು, ಯಲ್ಲಪ್ಪನವರ ನೀತಿ ಶತಕ, ಓಂ, 101 ಶಿವೋರಿ, 101 ವಿಶ್ವಕೋಶ, 101 ಬಣ್ಣದ ಬುಗುರಿ, 101 ಬಣ್ಣದ ಚಿಟ್ಟೆ, ಷಷ್ಠಿ, ಐವತ್ತೊಂದು ಮೇಳಗಳು, ಚಪ್ಪನೈವತ್ತಾರು ಕಥೆಗಳು, ಹೀಗೂ ಉಂಟು, ಮಕ್ಕಳ ಕಥೆಗಳು, ಜ್ಞಾನ ವಿಜ್ಞಾನ, 71 ತಂತ್ರಗಳು, 101 ನದಿಗಳು, ಧರೆಯ ಮೇಲಿನ ಸ್ವರ್ಗ, ಭಾವನ್ನಾರು ಭಾವಗಳು, 365 ವಂಡರ್, ಆಯ್ದಕತೆಗಳು, ನನ್ನ ಮೊರೆಯ ಕೇಳಿ, ವರ್ಷ ಹರ್ಷ, ಎಪ್ಪತ್ತೆರಡು ಸಂವತ್ಸರಗಳು, ಎಳೆಯರ ಜೀವಗಳು, ಎಳೆಯರ ಗೆಳೆಯರು (ಮಕ್ಕಳ ಸಾಹಿತ್ಯ). ಹಳಿ ತಪ್ಪಿದವಳು, ಚಿಗುರಿದ ಬದುಕು, ವೀರನ್ತೆ ವನ್ಕೆ ದುರುಗವ್ವ, ವರ್ಗಿನವು, ನೆರ್ಳು, ಆತ್ಮ, ಗುಟ್ಟು, ಸಜ್ಲು ಸಂಸ್ಥಾನ, ಮೂರು ತಲೆಮಾರು, ಕಾದಂಬರಿಕಾರ (ಕಾದಂಬರಿ). ಇದೆಂಥ ದೇಶ? ಇವರೆಂಥ ಜನ?, ವೀರನ್ತೆ ವನ್ಕೆ ದುರುಗವ್ವ, ಪತ್ತೆದಾರಿ, ಮೂರು ನಾಟಕಗಳು, ಅಬ್ಬಾ! ಇವರೆಂಥಾ ಜನ್ರಪ್ಪಾ? (ನಾಟಕ) ಕೇರಿಯಿಂದ ತೇರಿಗೆ, ತಾಯಿ, ಮೂರು ತಲೆಮಾರು, ವಸ ಚಿಗ್ರು ಅಳೇ ನಾರು, ಸಾರಿಗೆ ದರ್ಪಣ, ಎದೆ ಬಿದ್ದ ಕತೆಗಳು, ಕರುನಾಡ ಭಾರತ ಕಥಾ ಸಾಗರ, ನನ್ನಾತ್ಮ ಸಾಕ್ಷಿ, ದಿಕ್ಕು (ಆತ್ಮಕತೆ). ಡಿ. ಶಿವಲಿಂಗಪ್ಪನವರ ಯಶೋಗಾಥೆ, ಕಾಳಿಂಗರಾಯ್ನ ಕಥೆ, ಢಕ್ಕಲಿಗರು, ಕನ್ನಡ ವಿಶ್ವಕೋಶ, ದಕ್ಕಲಿಗರು : ಒಕ್ಕಲಿಗರು, ಬಿಸಿಲ ಬೆರಗು (ಸಂಪಾದನೆಗಳು). ಕರುನಾಡ ಭಾರತ ಕಥಾ ಸಾಗರ, ತಿರುಗು (ಪ್ರವಾಸ ಕಥನಗಳು).

ಯಲ್ಲಪ್ಪ ಕೆಕೆಪುರ