ಅಮ್ಮ ಹೇಳಿದ ಕಥೆಗಳು

Author : ತ್ರಿವೇಣಿ ಶಿವಕುಮಾರ್

Pages 106

₹ 60.00




Year of Publication: 2011
Published by: ದೇಸಿ ಪುಸ್ತಕ ಪ್ರಕಾಶನ
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಲೇಖಕಿ ತ್ರಿವೇಣಿ ಶಿವಕುಮಾರ್ ಅಮ್ಮ ಹೇಳಿದ ಕಥೆಗಳನ್ನು ಒಟ್ಟುಗೂಡಿಸಿ ಅಮ್ಮಂದಿರೊಂದಿಗೆ ಮಕ್ಕಳಿಗೂ ಕಥೆ ಓದುವ , ಓದಿ ಹೇಳುವ ಈ ಕಥಾ ಸಂಕಲನವನ್ನು ರೂಪಿಸಿದ್ದಾರೆ.

ತಾಯಿಂದಿರು ಮಕ್ಕಳಿಗೆ ಕಥೆ ಹೇಳಿ ಮಲಗಿಸುವುದು ಹಿಂದಿನ ಕಾಲದಲ್ಲಿ ರೂಡಿಯಾಗಿತ್ತು. ಅಮ್ಮನಿಗೆ ಅವರಮ್ಮ ಹೇಳಿದ ಕಥೆಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಮಕ್ಕಳ ಸೂಕ್ಷ್ಮ ಸಂವೇದನೆಯ ಬೆಳವಣಿಗೆಗೆ ಕಾರಣವಾಗುತ್ತಿದ್ದರು. ಆದರೆ ಈಗ ಆಧುನಿಕ  ಜಗತ್ತು ಮಕ್ಕಳನ್ನು  ಟಿವಿ ಮೊಬೈಲ್ ಗೆ ಒಪ್ಪಿಸಿ ಅವರ ಕಲ್ಪನಾ ಸಾಮರ್ಥ್ಯವನ್ನೇ ಕಿತ್ತುಕೊಂಡಿದೆ. ಇವುಗಳ ಹಿನ್ನಲೆಯಲ್ಲಿ ಕಥಾ ನಿರೂಪಣೆಯನ್ನು ಮಕ್ಕಳಿಗೆ ತೆರೆದಿಡುವ ವಿಭಿನ್ನ ಕೃತಿ ’ಅಮ್ಮ ಹೇಳಿದ ಕಥೆಗಳು’. 

About the Author

ತ್ರಿವೇಣಿ ಶಿವಕುಮಾರ್
(23 February 1954)

ಲೇಖಕಿ ತ್ರಿವೇಣಿ ಶಿವಕುಮಾರ್ ಅವರು 1954 ಫೆಬ್ರವರಿ 23 ರಂದು ತುಮಕೂರಿನಲ್ಲಿ ಜನಿಸಿದರು.  ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು “ನಿಸರ್ಗಪ್ರಿಯರ ನಾಡುಗಳಲ್ಲಿ, ಹವಳ ದ್ವೀಪಗಳಲ್ಲಿ, ದಿವ್ಯಮೌನದ ದೇಶಗಳಲ್ಲಿ, ಮಿಣ ಮಿಣ ಚೀಣಾ” ಪ್ರವಾಸ ಕಥನಗಳನ್ನು ಬರೆದಿದ್ಧಾರೆ..  “ಎಂ.ಕೆ. ಜಯಲಕ್ಷ್ಮಿ, ರತ್ನಮ್ಮ ಹೆಗಡೆ, ಸುಲೋಚನಾ ದೇವಿ ಆರಾಧ್ಯ, ಸ್ವರಗಂಗಾ-ಕೃತಿತುಂಗಾ-ಶ್ಯಾಮಲಾ ಜಿ. ಭಾವೆ” ಇವರ ಜೀವನ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ 'ಕಮಲಾ ರಾಮಸ್ವಾಮಿ ದತ್ತಿ' ಬಹುಮಾನ ಪಡೆದಿದ್ಧಾರೆ.    ...

READ MORE

Related Books