ಭೂಮಿಕಾ

Author : ಉಡುಪಿರಾವ್ ಕುಲಕರ್ಣಿ (ಜಸು ಕುಲಕರ್ಣಿ)

Pages 62

₹ 150.00
Year of Publication: 2020
Published by: ಗೀತಾ ಪ್ರಕಾಶನ
Address: ಬೇವೂರು, ತಾಲೂಕು ಹಾಗೂ ಜಿಲ್ಲೆ: ಬಾಗಲಕೋಟ

Synopsys

ಕವಿ ಉಡುಪಿರಾವ್ ಕುಲಕರ್ಣಿ (ಜೇಸು) ಅವರ ಕವನ ಸಂಕಲನ-ಭೂಮಿಕಾ. ಒಟ್ಟು 52 ಕವಿತೆಗಳಿವೆ.ನಾನೊಬ್ಬ ಚಿತ್ರಕಾರ. ಮನಸ್ಸಿಗೆ ಹೊಳೆದಿದ್ದನ್ನೆಲ್ಲ ಹಾಳೆಯ ಮೇಲೆ ಮೂಡಿಸಲು ಚಿತ್ರಕಲೆ ಸಾಕಷ್ಟು ಶ್ರಮ-ವೇಳೆ ಕೇಳುತ್ತಿತ್ತು. ಆದ್ದರಿಂದ, ಭಾವಘಳನ್ನು ಅಳಿಸಿ ಹೋಗಲು ಬಿಡಬಾರದೆಂದು ಅವುಗಳಿಗೆ ಅಕ್ಷರ ರೂಪಗಳಲ್ಲಿ ಹಿಡಿದಿಟ್ಟೆ. ಇಲ್ಲಿಯ ಬಹುತೇಕ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ’ ಎಂದು ಕವಿ ಜೇಸು ಅವರು ಹೇಳಿಕೊಂಡಿದ್ದಾರೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಅಬ್ಬಾಸ್ ಮೇ;ಲಿನಮನಿ ಅವರು ‘ಬದುಕುವು ಒಂದು ಕಲೆ; ಬದುಕಿ ತೋರಿಸುವುದೂ ಒಂದು ಕಲೆ ಎಂದು ನಂಬಿಒಕೊಂಡಿರುವ ಕವಿ ಬಣ್ಣ-ಕುಂಚದ ಕಾಯಕದಲ್ಲಿ ರೇಖಿಸಿದ್ದಾರೆ. ಬಹುತೇಕ ಕಾವ್ಯಗಳ ಧ್ವನಿಯು ಸಹೃದಯಯದ ಎದೆಯ ಗಹ್ವರದಲ್ಲಿ ಮಾರ್ದನಿಸಿ ಒಳಬನಿಯನ್ನು ಹನಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.

ಹಿರಿಯ ರಂಗಕರ್ಮಿ ವಿನೋದ ಅಂಬೇಕರ್ ‘ಜೇಸು ಅವರ ಕವನಗಳಲ್ಲಿ ಧ್ವನಿಗೆ ಪ್ರಾಧಾನ್ಯತೆ ಇದೆ. ವರಕವಿ ಬೇಂದ್ರೆ ಅವರ ಸಾಹಿತ್ಯದ ಛಾಯೆ ಇದೆ. ಕವಿಯ ಸ್ವಾನುಭವವಿದೆ. ಒಲವಿನ ಸತ್ವದಲ್ಲಿ ಕವಿಗೆ ಬಹಳಷ್ಟು ನಂಬಿಕೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಉಡುಪಿರಾವ್ ಕುಲಕರ್ಣಿ (ಜಸು ಕುಲಕರ್ಣಿ)

ಲೇಖಕ ಉಡುಪಿರಾವ್ ಜೆ. ಕುಲಕರ್ಣಿ ಅವರು ಜಸು ಕುಲಕರ್ಣಿ ಎಂಬ ಕಾವ್ಯನಾಮದೊಂದಿಗೆ ಬರೆಯುತ್ತಾರೆ. ಬಾಗಲಕೋಟ ಜಿಲ್ಲೆಯ ಬೇವೂರು ಗ್ರಾಮದ ಜಿ.ಜಿ. ಬೇವೂರು ಆದರ್ಶ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕರಾಗಿ ಈಗ ನಿವೃತ್ತರು.ಅಂಬಿಕಾತನಯದತ್ತರ ಜೀವನ ಚರಿತ್ರೆ ಕುರಿತು ಬರೆದ ಖಂಡಕಾವ್ಯ ಇವರ ಪ್ರಮುಖ ಕೃತಿ ‘ಬೆಳದಿಂಗಳು ನೋಡ’. ಭೂಮಿಕಾ ಎಂಬುದು ಇವರ ಕವನ ಸಂಕಲನ. ...

READ MORE

Related Books