ಗಂಡುಗಲಿಗಳ ಆಟ ಕಬಡ್ಡಿ

Author : ಎಂ.ಜೆ. ಸುಂದರ್ ರಾಮ್

Pages 264

₹ 200.00




Year of Publication: 2011
Published by: ದೀಪ್ತಿ ಪ್ರಿಂಟರ್‍ಸ್,
Address: ಕನಕ ಕಾಂಪ್ಲೆಕ್ಸ್, ಶ್ರೀನಿವಾಸನಗರ ಬೆಂಗಳೂರು
Phone: 9901853160

Synopsys

’ಗಂಡುಗಲಿಗಳ ಆಟ ಕಬಡ್ಡಿ’ ಎಂ.ಜೆ ಸುಂದರ್ ರಾಮ್ ಅವರು ಆಟಗಳಿಗೆ ಸಂಬಂಧಿಸಿದ ಬರೆದ ಕೃತಿ. ಮೇಲ್ನೋಟಕ್ಕೆ ಕಬ್ಬಡ್ಡಿ ಒರಟು ಎನಿಸಿದರೂ ಉಸಿರಾಟದ ವ್ಯಾಯಾಮದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಐಶ್ವರ್ಯಗಳನ್ನೂ ಪೋಷಿಸುವ ಪ್ರಾಣಾಯಾಮವನ್ನು ಈ ಆಟ ಅಳವಡಿಸಿಕೊಂಡಿದೆ. ಆದ್ದರಿಂದಲೇ, ಇತರೆ ಆಟಗಳಿಗಿಂತ ಇದು ಭಿನ್ನವಾಗಿದೆ. ಇಂತಹ ಅಪೂರ್ವ ಆಟವನ್ನು ನೋಡಿ ಬೆರಗಾದ ವಿವಿಧ ದೇಶಗಳ ಯುವಕರು ’ ಹೀಗೂ ಒಂದು ಆಟವಿದೆಯೇ’ ಎಂದು ಮೂಕವಿಸ್ಮಿತರಾಗಿ, ಕಬ್ಬಡ್ಡಿಗೆ ಮಾರು ಹೋಗಿದ್ದಾರೆ. ಇಂತಹ ಉತ್ಕೃಷ್ಟ ಆಟವೊಂದನ್ನು ನೀಡಿದ್ದಕ್ಕಾಗಿ ಭಾರತದ ಬಗ್ಗೆಯೂ ಅವರ ಗೌರವ ಇಮ್ಮಡಿಗೊಳಿಸಿದೆ. ಒಂದಾನೊಂದು ಕಾಲದಲ್ಲಿ, ಕಬಡ್ಡಿ ಒರಟಾಗಿಯೇ ಇತ್ತು. ಆಟಗಾರರ ಮೈಯೆಲ್ಲ ರಕ್ತಮಯವಾಗಿತ್ತು. ಬಟ್ಟೆಬರೆ ಕೊಳಕಾಗಿ, ಹರಿದು, ನೋಡುಗರಿಗೆ ಅಸಹ್ಯವುಂಟು ಮಾಡುತ್ತಿದ್ದವು. ಆದರೆ, ಇಂದು  ಜನಪ್ರಿಯ ಆಟವಾಗಿ ಮಾರ್ಪಟ್ಟು, ಶಕ್ತಿಗಿಂತ ಯುಕ್ತಿಯೇ ಪ್ರಧಾನವಾಗಿದೆ. ಉತ್ಸಾಹಿ ಆಟಗಾರರ ಹಾಗೂ ಕೋಚ್ ಗಳ ಸತತ ಪ್ರಯತ್ನಗಳಿಂದ ಪ್ರತಿದಿನವೂ ಅನೇಕ ಅತ್ಯಾಧುನಿಕ ಕೌಶಲ್ಯಗಳು, ರಣನೀತಿಗಳು ಮತ್ತು ತಾಂತ್ರಿಕತೆಗಳು ಸೇರ್ಪಡೆಯಾಗಿವೆ’ ಎನ್ನುತ್ತಾರೆ ಲೇಖಕರು.

About the Author

ಎಂ.ಜೆ. ಸುಂದರ್ ರಾಮ್

ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...

READ MORE

Related Books