ಕಾವ್ಯ ಸೃಷ್ಟಿಯ ಸ್ವರೂಪ

Author : ಪ್ರಭುಶಂಕರ

Pages 64

₹ 50.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕಾವ್ಯ ಅಥವಾ ಕಲೆಯೊಂದು ಹೇಗೆ ಸೃಜನಶೀಲರೊಳಗೆ ಹುಟ್ಟುತ್ತದೆ ಎನ್ನುವುದೇ ಕುತೂಹಲಕರ ಸಂಗತಿ. ಅದು ಏಕೆ ಹುಟ್ಟುತ್ತದೆ ಎಂಬ ಪ್ರಶ್ನೆ ಇನ್ನೂ ಆಸಕ್ತಿದಾಯಕ ವಿಚಾರ. ಅಂತಹ ಕುತೂಹಲವನ್ನು ತಣಿಸುವ ಯತ್ನ ಹಿರಿಯ ಸಾಹಿತಿ ಪ್ರಭುಶಂಕರ ಅವರದ್ದು. 
ಕಲಾವಿದನ ಮನೋಲೋಕದ ವ್ಯಾಪಾರಗಳೂ ಕಲಾವಿದನ ಹೃದಯದಲ್ಲಿ ಒಂದು ವಿಧವಾದ ರಾಸಾಯನಿಕ ಕ್ರಿಯೆಗೆ ಒಳಗಾಗಿ ಅನಂತರ ಕಲೆಯಾಗಿ ಹೊಮ್ಮುತ್ತದೆ' ಎನ್ನುವ ಪ್ರಭುಶಂಕರರ ನಿಲುವು, ಕಾವ್ಯದ ನೆಲೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಅವರು ಮುಖಾಮುಖಿಯಾಗಿದ್ದಾರೆ. ಕವಿ-ಕಾವ್ಯ, ಕಲೆ-ಕಲಾವಿದರನ್ನು ಅರ್ಥ ಮಾಡಿಕೊಳ್ಳಲು ಈ ಕಿರುಪುಸ್ತಕ ನೆರವಾಗುತ್ತದೆ.

'ಕಲಾತ್ಮಕವಾದ ಮನಸ್ಸಿನಲ್ಲಿ ವಸ್ತು ಮತ್ತು ರೂಪಗಳು ಎರಕಗೊಳ್ಳುತ್ತದೆ. ಆ ಎರಕ ವಸ್ತುವೂ, ಅಲ್ಲ ರೂಪವೂ ಅಲ್ಲ, ಅದು ಕೇವಲ ಕಲೆ' ಎನ್ನುವ ಅವರ ಮಾತಿನಲ್ಲಿ ಬೆಳಕಿದೆ. ಕಲೆಯ ಅಭ್ಯಾಸಿಗಳು, ಹೊಸ ಕವಿಗಳಿಗೆ ಇದೊಂದು ಕೈಪಿಡಿ ಹೊರಜಗತ್ತಿನ ವಿದ್ಯಮಾನಗಳು ಕವಿಯೊಳಗೆ ಮರುಹುಟ್ಟು ಪಡೆಯುವ ಬಗೆ, ಮನೋಲೋಕದ ವ್ಯಾಪಾರಗಳು ಒಂದು ಬಗೆಯ ರಾಸಾಯನಿಕ ಕ್ರಿಯೆಯಾಗಿ ಕಲೆ ಸೃಷ್ಟಿಯಾಗುವ ಪ್ರಕ್ರಿಯೆಯನ್ನು ಕವಿ ಅಥವಾ ಕಲಾವಿದರೇ ಬಾಹ್ಯಲೋಕಕ್ಕೆ ಸ್ಪಂದಿಸಲು ಕಾರಣ ಏನು ಎಂಬುದನ್ನು ಕೃತಿ ಮನೋಜ್ಞವಾಗಿ ವಿವರಿಸುತ್ತದೆ.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books