ಪ್ರಪಂಚದ ಪ್ರಥಮಗಳು

Author : ಸಂಪಟೂರು ವಿಶ್ವನಾಥ್

Pages 253

₹ 265.00




Year of Publication: 2018
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ-ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 080 2244 3996

Synopsys

ಲೇಖಕ ಸಂಪಟೂರು ವಿಶ್ವನಾಥ ಅವರ ಕೃತಿ-ಪ್ರಪಂಚದ ಪ್ರಥಮಗಳು. ಸಚಿತ್ರ ಮಾಹಿತಿ ಕೋಶ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಸಾಮಾನ್ಯ ಜ್ಞಾನ ವೃದ್ಧಿಯ ದೃಷ್ಟಿಯಿಂದಲೂ, ಸ್ಪಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಾಗೂ ಸಂದರ್ಶನಗಳಿಗೆ ತಯಾರಿ ನಡೆಸಲು ಅತ್ಯಂತ ಉಪಯುಕ್ತವಾದ ಕೃತಿ ಇದು. ಪ್ರಪಂಚದ ಎಲ್ಲ ಪ್ರಥಮಗಳ ಮಾಹಿತಿ ಜೊತೆಗೆ ಅವುಗಳಿಗೆ ಅನ್ವಯಿಸುವಂತೆ ನೀಡಿರುವ ಚಿತ್ರಗಳು ಓದುಗರ ಮನವನ್ನು ಸೆಳೆಯುತ್ತವೆ.

About the Author

ಸಂಪಟೂರು ವಿಶ್ವನಾಥ್
(28 February 1938)

ಲೇಖಕ ಸಂಪಟೂರು ವಿಶ್ವನಾಥ್‌ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...

READ MORE

Related Books