ಸಂಸ್ಕೃತಿ

Author : ನೀಲತ್ತಹಳ್ಳಿ ಕಸ್ತೂರಿ

Pages 128

₹ 81.00
Year of Publication: 2017
Published by: ಭಾರತೀಯ ವಿದ್ಯಾಭವನ
Address: # 41/1, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001

Synopsys

ಹಿರಿಯ ಸಾಹಿತಿ ಎಸ್. ರಾಮಸ್ವಾಮಿ ಅವರು ಸಂಗ್ರಹಿಸಿದ ಸೂಕ್ತಿ ಹಾಗೂ ಸುಭಾಷಿತಗಳನ್ನು ಹಿರಿಯ ಸಾಹಿತಿ ನೀಲತ್ತಹಳ್ಳಿ ಕಸ್ತೂರಿ ಅವರು ಅನುವಾದಿಸಿದ ಕೃತಿ-ಸಂಸ್ಕೃತಿ. ಇದು ವಿಸ್ತೃತ ಆವೃತ್ತಿ. ಪ್ರಾಚೀನ ಕಾಲದಿಂದ ಹಿಡಿದು ಆರ್ವಾಚೀನ ಕಾಲದವರೆಗೆ ಮತ್ತು ಪಾಶ್ಚಾತ್ಯದಿಂದ ಹಿಡಿದು ಪೌರ್ವಾತ್ಯದವರೆಗೆ ಅತಿ ಮಹತ್ವದ ಸೂಕ್ತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ತಮ್ಮನ್ನು ಒಳಗೊಂಡಂತೆ ವಿದ್ವಾನ್ ಎನ್. ರಂಗನಾಥ ಶರ್ಮ, ಡಾ. ಎಸ್.ಕೆ. ರಾಮಚಂದ್ರರಾವ್, ಶತಾವಧಾನಿ ಆರ್. ಗಣೇಶ್, ಡಾ. ಸಿದ್ಧಯ್ಯ ಪುರಾಣಿಕ, ಡಾ. ಎಲ್.ಎಸ್. ಶೇಷಗಿರಿರಾವ್ ಇತರೆ ಗಣ್ಯರು ಸಂಗ್ರಹಿಸಿ ನೀಡಿದ್ದ ಸೂಕ್ತಿಗಳನ್ನು ನೀಡಲಾಗಿದೆ. ಈ ಕೃತಿಯು ಓದುಗ ಆಸಕ್ತರಿಗೆ ಉತ್ತಮ ಮಾರ್ಗದರ್ಶಿಯೂ, ಜ್ಞಾನಬೋಧೆಯೂ ಆಗಿದೆ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books