ಸರಳ ಸಮೃದ್ಧ ಹೈನುಗಾರಿಕೆ

Author : ಗಣೇಶ ಹೆಗಡೆ ನೀಲೆಸರ

Pages 134

₹ 150.00




Year of Publication: 2022
Published by: ನದಿ ಪ್ರಕಾಶನ
Address: ಬೆಂಗಳೂರು

Synopsys

ಸರಳ ಸಮೃದ್ಧ ಹೈನುಗಾರಿಕೆ ಎಂಬ ಪುಸ್ತಕದ ಅಗತ್ಯತೆಯ ವ್ಯಾಪ್ತಿ ಬಹಳ ದೊಡ್ಡದು. ಪೂರ್ಣ ಓದಿದಾಗ ಈವರೆಗೆ ಒಮ್ಮೆಯೂ ಜಾನುವಾರು ಮೈಮುಟ್ಟದವರಿಗೆ ಎರಡು ಆಕಳು ಸಾಕಿಯೇಬಿಡೋಣ ಅನ್ನಿಸುವಷ್ಟು ಆಪ್ತವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಅನೇಕ ಒಳ ಮಾಹಿತಿಗಳ ಕಣಜ: ನಮ್ಮಂತಹ ಪಶುವೈದ್ಯರಿಗೂ ವೃತ್ತಿಯ ಮನರ್ನೋಟ ಇಲ್ಲಿದೆ. ಹಟ್ಟಿ ಕಟ್ಟುವುದು. ಸ್ವತಃ ಪಶು ಆಹಾರ ತಯಾರಿ, ಸಾವಯವ ಹಾಲು, ಮನೆಮದ್ದು, ವೈಜ್ಞಾನಿಕ ಸಾಕಣೆ ಕ್ರಮ-ಹೀಗೆ ಮುಟ್ಟದ ವಿಷಯಗಳಿಲ್ಲ, ಮಾಲೀಕನನ್ನು ಕೇಂದ್ರವಾಗಿರಿಸಿಯೂ ಹಸುವಿನ ಆರೈಕೆಯ ಎಲ್ಲ ಮಗ್ಗಲುಗಳನ್ನು ಇಷ್ಟವಾಗುವಂತೆ ಅನಾವರಣವಿದು ಎಂದು ಡಾ. ಪಿ. ಮನೋಹರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗಣೇಶ ಹೆಗಡೆ ನೀಲೆಸರ

ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಡಿಪ್ಲೊಮಾ ಪದವೀಧರರು. ಪ್ರಸ್ತುತ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಡಿಯಲ್ಲಿ ಶಿರಸಿಯಲ್ಲಿರುವ 'ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ'ದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಸ್ವದೇಶಿ ವಿಜ್ಞಾನ ಆಂದೋಲನ, 6ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ 'ಅತ್ಯುತ್ತಮ ಪ್ರಬಂಧ ಮಂಡನೆ' ಪ್ರಶಸ್ತಿ. ಕೃಷಿಮಾಧ್ಯಮ ಕೇಂದ್ರ ಧಾರವಾಡ  ಸಂಸ್ಥೆಯಿಂದ ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಅತ್ಯುತ್ತಮ ಅಭ್ಯರ್ಥಿ ಪುರಸ್ಕೃತರು. 2012-13ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 'ಹೈನು ಹೊನ್ನು' ಕೃತಿಗಾಗಿ ಶ್ರೇಷ್ಠ ಲೇಖಕ ಪ್ರಶಸ್ತಿ, 2016 ...

READ MORE