About the Author

ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಡಿಪ್ಲೊಮಾ ಪದವೀಧರರು. ಪ್ರಸ್ತುತ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಡಿಯಲ್ಲಿ ಶಿರಸಿಯಲ್ಲಿರುವ 'ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ'ದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಸ್ವದೇಶಿ ವಿಜ್ಞಾನ ಆಂದೋಲನ, 6ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ 'ಅತ್ಯುತ್ತಮ ಪ್ರಬಂಧ ಮಂಡನೆ' ಪ್ರಶಸ್ತಿ. ಕೃಷಿಮಾಧ್ಯಮ ಕೇಂದ್ರ ಧಾರವಾಡ  ಸಂಸ್ಥೆಯಿಂದ ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಅತ್ಯುತ್ತಮ ಅಭ್ಯರ್ಥಿ ಪುರಸ್ಕೃತರು.

2012-13ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 'ಹೈನು ಹೊನ್ನು' ಕೃತಿಗಾಗಿ ಶ್ರೇಷ್ಠ ಲೇಖಕ ಪ್ರಶಸ್ತಿ, 2016 ರಲ್ಲಿ  ಶ್ರೇಷ್ಠ ಪಶುವೈದ್ಯ  ಪ್ರಶಸ್ತಿ ಪುರಸ್ಕೃತರು. ಪ್ರಸ್ತುತ ಪಶುವೈದ್ಯ ಸಾಹಿತ್ಯ ಪರಿಷತ್ ನ ಮುಖವಾಣಿ ಪಶುವೈದ್ಯ ಸಾಹಿತ್ಯ ಲೋಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಸಾಹಿತ್ಯ ಮತ್ತು ಗಿಡಮೂಲಿಕಾ ಪಶುವೈದ್ಯ ಪದ್ಧತಿಯಲ್ಲಿ ಆಸಕ್ತರು. ಪಶುಸಂಗೋಪನೆ, ಕೃಷಿ, ಮೌಲ್ಯವರ್ಧನೆ, ಸುಸ್ಥಿರತೆ, ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳ ಕುರಿತು ನೂರಾರು ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದು ಲೇಖಕರ ಏಳನೆಯ ಕೃತಿಯಾಗಿದೆ. 

ಗಣೇಶ ಹೆಗಡೆ ನೀಲೆಸರ