ಶ್ವೇತಭವನ ಕಥನ

Author : ಸುಧೀಂದ್ರ ಬುಧ್ಯ

Pages 232

₹ 200.00
Year of Publication: 2020
Published by: ಗೀಂತಾಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 9449886390

Synopsys

’ಶ್ವೇತಭವನ ಕಥನ’ ಎರಡು ಭಾಗಗಳನ್ನು ಹೊಂದಿದೆ. ‘ಚುನಾವಣಾ ಕಥನ’ ಭಾಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ವಿವರಿಸುವ 17 ಲೇಖನಗಳು ಇವೆ. ಪ್ರಾಥಮಿಕ ಹಂತದ ಚುನಾವಣೆಗಳು ಹೇಗೆ ನಡೆಯುತ್ತವೆ, ರನ್ನಿಂಗ್ ಮೇಟ್ ಆಯ್ಕೆಗೆ ಬಳಸುವ ಮಾನದಂಡವೇನು, ಅಧ್ಯಕ್ಷೀಯ ಸಂವಾದದಲ್ಲಿ ಗಮನಿಸುವ ಅಂಶಗಳೇನು, ಅಧಿಕಾರ ಹಸ್ತಾಂತರ ಹೇಗೆ ನಡೆಯುತ್ತದೆ ಎಂಬಿತ್ಯಾದಿ ವಿವರಗಳ ಜೊತೆ ಚಾರಿತ್ರಿಕ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳು ಇವೆ. ‘ವ್ಯಕ್ತಿ/ವಿಚಾರ ಮಂಥನ’ ಭಾಗದಲ್ಲಿ ವಾಷಿಂಗ್ಟನ್ ಹಾಗೂ ಜೆಫರ್ಸನ್ ಅವರಿಂದ ಮೊದಲ್ಗೊಂಡು ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿರುವ ಅಧ್ಯಕ್ಷರು ಹಾಗೂ ಅವರು ಎದುರಿಸಿದ ಸವಾಲುಗಳನ್ನು ಲೇಖಕ ಸುಧೀಂದ್ರ ಬುಧ್ಯ ಅವರು ಅವಲೋಕಿಸಿದ ಬರಹಗಳು ಇವೆ.

ರೊನಾಲ್ಡ್ ರೇಗನ್ ಅವಧಿಯಲ್ಲಿ ಸೋವಿಯತ್ ಜೊತೆ ಸಂಬಂಧ ಸುಧಾರಿಸಿಕೊಳ್ಳಲು ಅಮೆರಿಕ ಮುಂದಡಿಯಿಟ್ಟಿತು. ಆ ಪ್ರಕ್ರಿಯೆ ಮಹತ್ವದ್ದು. ಹಾಗಾಗಿ ರೇಗನ್ ಕುರಿತ ಅಧ್ಯಾಯ ವಿಸ್ತಾರವಾಗಿ ಬಂದಿದೆ. ವಿವಿಧ ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿ, 8 ವರ್ಷಗಳ ಕಾಲ ಉಪಾಧ್ಯಕ್ಷರಾಗಿ, 4 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬುಷ್ ಸೀನಿಯರ್ ಅಮೆರಿಕ ಕಂಡ ವಿಶಿಷ್ಟ ರಾಜಕಾರಣಿ. ಹಾಗಾಗಿ ಅವರ ಕುರಿತ ಅಧ್ಯಾಯವೂ ವಿಸ್ತೃತವಾಗಿ ಬಂದಿದೆ. ಇನ್ನುಳಿದ ಅಧ್ಯಕ್ಷರ ಜೀವನ ಕಥನವನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. 

 

About the Author

ಸುಧೀಂದ್ರ ಬುಧ್ಯ
(04 September 1984)

ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ. ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಓದಿದ್ದು ಇಂಜಿನಿಯರಿಂಗ್. ಆಸಕ್ತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ. ಚೆನ್ನೈ, ಬೆಂಗಳೂರು, ಅಮೆರಿಕದ ಸಿನ್ಸಿನಾಟಿ, ಚಿಕಾಗೋ ನಗರಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಡೆಸಿದ ಅನುಭವ. ಸೃಜನಶೀಲ ಲೇಖಕ, ಕತೆಗಾರ, ಅಂಕಣಕಾರ, ರಾಜ್ಯಮಟ್ಟದ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ನೂರಾರು ಬರಹಗಳು ಪ್ರಕಟವಾಗಿವೆ. ‘ಹೊಸದಿಗಂತ’ ಪತ್ರಿಕೆಯಲ್ಲಿ 2011ರಿಂದ 2014ರವರೆಗೆ ‘ಪರದೇಶಿ ಪರಪಂಚ’ ಅಂಕಣ, ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಕೈಗೊಂಡ ಚೊಚ್ಚಲ ಅಮೆರಿಕ ಪ್ರವಾಸ ಕುರಿತ ವರದಿ ‘ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ’, ಅಮೆರಿಕ ...

READ MORE

Conversation

Related Books