ನವಕರ್ನಾಟಕ ಪ್ರಕಾಶನ

ಪ್ರಗತಿಶೀಲ ಸಾಹಿತ್ಯದ ಮುದ್ರಣ, ಪ್ರಕಾಶನ ಹಾಗೂ ಪ್ರಸಾರದ ಉದ್ದೇಶದಿಂದ ಸಮಾನಮನಸ್ಕ ಸಾಹಿತ್ಯಪ್ರಿಯರು, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ 1960ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಸಂಸ್ಥೆ. ಆ ಸಮಯದಲ್ಲಿ ಪುಸ್ತಕ ಚಟುವಟಿಕೆಗಳ ಮುಖ್ಯ ಕೇಂದ್ರಗಳಾಗಿದ್ದ ನ್ಯೂ ಸೆಂಚುರಿ ಬುಕ್ ಹೌಸ್ (ಬೆಂಗಳೂರು), ಪ್ರಭಾತ್ ಬುಕ್ ಹೌಸ್ (ಮಂಗಳೂರು) ಮತ್ತು ಮುದ್ರಣ, ಪ್ರಕಾಶನ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಶಕ್ತಿ ಪ್ರಿಂಟರ್ಸ್ (ಬೆಂಗಳೂರು)- ಈ ಮೂರು ಸಂಸ್ಥೆಗಳು ಅದೇ ವರ್ಷ (1960) ನವಕರ್ನಾಟಕದೊಂದಿಗೆ ವಿಲೀನಗೊಂಡು ಅದನ್ನು ಬಲಪಡಿಸಿದವು.

ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ರಾಜ್ಯದ ಮೂಲೆಮೂಲೆಗಳಿಗೆ ಸದಭಿರುಚಿಯ ಓದನ್ನು ಪ್ರಸರಿಸುತ್ತ ಬಂದಿರುವ ನವಕರ್ನಾಟಕ ಈಗ ಎಂಟು ಸಂಚಾರಿ ಪ್ರದರ್ಶನ ತಂಡಗಳನ್ನು ಹೊಂದಿದ್ದು,ಆಯ್ದ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆ-ಕಛೇರಿಗಳಲ್ಲಿ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸುತ್ತಾ ವರ್ಷಪೂರ್ತಿ ಪುಸ್ತಕಯಾತ್ರೆಯಲ್ಲಿ ತೊಡಗಿಕೊಂಡಿದೆ. ತನ್ನದೇ ಆದ ಸಂಪಾದಕ ಮಂಡಳಿ, ಪುಸ್ತಕ ಹಾಗೂ ಪತ್ರಿಕಾ ವಿಭಾಗ, ಗಣಕೀಕೃತ ಅಕ್ಷರ ಜೋಡಣೆ ಮತ್ತು ವಿನ್ಯಾಸ, ಮುದ್ರಣಾಲಯ, ಐದು ಪುಸ್ತಕ ಮಳಿಗೆಗಳ ಹಾಗೂ ಎಂಟು ಪ್ರದರ್ಶನ ತಂಡಗಳ ಮೂಲಕ ರಾಜ್ಯಾದ್ಯಂತ ಅತ್ಯುತ್ತಮ ಮಾರಾಟ ಜಾಲ - ಇವೆಲ್ಲವನ್ನೂ ಹೊಂದಿರುವ ಕರ್ನಾಟಕದ ಏಕೈಕ ಪೂರ್ಣಪ್ರಮಾಣದ ಸುಸಜ್ಜಿತ ಪ್ರಕಾಶನ ಸಂಸ್ಥೆಯಾಗಿ ನವಕರ್ನಾಟಕ ಈಗ ಬೆಳೆದುನಿಂತಿದೆ.

ಈವರೆಗೆ 3100ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಪ್ರಕಾಶನದ ಅನೇಕ ಶೀರ್ಷಿಕೆಗಳು ಹಲವಾರು ಮರುಮುದ್ರಣಗಳನ್ನು ಕಂಡಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ. ಜನಪರ ಸಾಹಿತ್ಯ ಪ್ರಸಾರದ ಮೂಲಕ ನಾಡಿನ ಬುದ್ಧಿಜೀವಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಓದುಗರ ದೊಡ್ಡ ಬಳಗವನ್ನೇ ಈ ಸಂಸ್ಥೆ ಹೊಂದಿದೆ. ಪ್ರಕಾಶನ ಕ್ಷೇತ್ರದ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿದೆ.

ಕನ್ನಡ ಪುಸ್ತಕ ಸಂಸ್ಕೃತಿಯನ್ನು ಹರಡಲು ಗಣನೀಯ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ 2006ರ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತೀಯ ಪ್ರಕಾಶಕರ ಮತ್ತು ಪುಸ್ತಕ ಮಾರಾಟಗಾರರ ಸಂಘಗಳ ಒಕ್ಕೂಟ (FPBAI, New Delhi) 2008ರಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ‘ಅತ್ಯುತ್ತಮ ಪ್ರಾದೇಶಿಕ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು 2010ರ ‘ಅತ್ಯುತ್ತಮ ಪ್ರಕಾಶಕ

ಪ್ರಕಾಶನ ರಂಗದಲ್ಲಿ ಐದು ದಶಕಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ನವಕರ್ನಾಟಕ ಪ್ರಕಾಶನ ಪ್ರಗತಿಶೀಲ ಚಳುವಳಿಯೊಂದಿಗೆ ಹೀಗೆ ಹೆಜ್ಜೆ ಹಾಕುವ ಮೂಲಕ ಜನಪರ ಪುಸ್ತಕ ಸಂಸ್ಕೃತಿಯನ್ನು ಉಳಿಸಿ; ಬೆಳೆಸಲಿ.

BOOKS BY NAVAKARNATAKA PRAKASHANA

ಕಬ್ಬಿಣದ ಕಾಚಾಗಳು

ಪಾವನಗಂಗೆಯರು ಸಂಪುಟ -1

ಪಾವನಗಂಗೆಯರು ಸಂಪುಟ -2

ಪಾವನಗಂಗೆಯರು ಸಂಪುಟ -3

ಪಾವನಗಂಗೆಯರು ಸಂಪುಟ -4

ಜಮ್ಲೊ ಹೆಜ್ಜೆ ಹಾಕುತ್ತಾಳೆ

ಭಾವಲೋಕ

ತರವಲ್ಲ ತಗಿ ನಿನ್ನ ತಂಬೂರಿ ಸ್ವರ…

Publisher Address

101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001

Navakarnataka Publications Private Limited, 101, Embassy Centre, Crescent Road, Kumara Park East,BENGALURU - 560 001

Website

https://www.navakarnatakaonline.com/

Publisher Contact

080 - 22161900 / 22161901 / 902

Email

nkpl.online@gmail.com