About the Author

ಡಾ. ಸಿ. ಆನಂದರಾಮ ಉಪಾಧ್ಯ ಅವರು ಕರ್ಣಾಟಕ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಮುಖ್ಯಸ್ಥರು ಹಾಗೂ ಸಹಾಯಕ ಮಹಾಪ್ರಬಂಧಕರು ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕ್ ಉದ್ಯೋಗಕ್ಕೂ ಮುನ್ನ ಮಳವಳ್ಳಿಯ ಶಾಂತಿ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಇವರ ಪ್ರೌಢ ಪ್ರಬಂಧ “ಯಕ್ಷಗಾನ ಮಹಾಭಾರತ ಪ್ರಸಂಗಗಳು” ಎಂಬ ಈ ಕೃತಿಗೆ, ಉಸ್ಮಾನಿಯ ವಿಶ್ವವಿದ್ಯಾಲಯದ ಪಿ.ಹೆಚ್.ಡಿ. ಪದವಿ ಲಭಿಸಿದೆ. 1990ರಲ್ಲಿ ಈ ಕೃತಿ ಪ್ರಕಟಗೊಂಡಿದೆ. ಇದಲ್ಲದೆ, “ಯಕ್ಷ ದರ್ಶನ” ಹಾಗೂ “ಯಕ್ಷಗಾನ ರಾಮಾಯಣ ಪ್ರಸಂಗಗಳು” ಇವರ ಪ್ರಕಟಿತ ಕೃತಿಗಳಾಗಿವೆ. “ಆರ್ಯಭಟ” ಪ್ರಶಸ್ತಿ ಹಾಗೂ “ನರಸಿಂಹ” ಪ್ರಶಸ್ತಿಗಳು ಸಂದಿರುತ್ತವೆ. ಇವರು ಹದಿನಾಲ್ಕು ವರ್ಷಗಳ ಕಾಲ ಬೇರೆ ಬೇರೆ ರೋಟರಿ ಕ್ಲಬ್‌ಗಳಲ್ಲಿ ಸದಸ್ಯರಾಗಿ, ಅನೇಕ ರೋಟರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿರುತ್ತಾರೆ.

 

ಆನಂದರಾಮ್ ಉಪಾಧ್ಯ