About the Author

ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ  ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.

ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ),  Traffic is the Driving Issue, ಮನಮಂಥನ,  ಕೋವಿಡ್-19 ಕರಾಳ ನೆರಳಿನಲ್ಲಿ, ಗಿಳಿವಿಂಡು, ಕಲೋಪಾಸಕ ಪಿ.ಎಸ್. ಗ್ರಾಮಪುರೋಹಿತ್ (ಅಭಿನಂದನಾ ಗ್ರಂಥ) - ಸಂಪಾದನೆ,  ಗೀಜಗನಗೂಡು, ಹಾಯಿದೋಣಿ , ಹೇಮಂತಗಾನ

ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್

(17 Apr 1973)