ಕಲರವ

Author : ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್

Pages 65
Year of Publication: 2020

Synopsys

ಕಲರವ ಕವನ ಸಂಕಲನದಲ್ಲಿ ಒಟ್ಟು 64 ಕವನಗಳಿವೆ. ಎಲ್ಲವೂ ಪೊಲೀಸ್ ಅಧಿಕಾರಿಯೊಬ್ಬನ ಜೀವನ ದರ್ಶನದ ಪ್ರತಿರೂಪವೆಂಬಂತೆ ಕಂಡುಬರುತ್ತವೆ. ತಮಗನಿಸಿದ ಭಾವನೆಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಕಾದಿರುವ ಮನಸ್ಸು ಈ ಕವನಗಳಲ್ಲಿ ಪ್ರತಿಬಿಂಬಿತವಾಗಿದೆ. ಕವನಗಳು ಬಹಳ ಸರಳ ಭಾಷೆಯಲ್ಲಿ ರಚಿತವಾಗಿದ್ದು ವಿಶೇಷವಾಗಿ ತಮ್ಮನ್ನು ತಾವು ಓದಿಸಿಕೊಂಡು ಹೋಗುತ್ತವೆ. ಮನಸ್ಸು, ಕನಸುಗಳು, ಭಾವನೆಗಳು, ಪ್ರಕೃತಿ ಮತ್ತು ಬೃಂದಾವನದ ಕೃಷ್ಣ ಇಲ್ಲಿನ ಕವನಗಳಲ್ಲಿ ಮುಖ್ಯವಾಗಿ ಕಂಡುಬರುವ ವಿಷಯಗಳು ಮತ್ತು ಪಾತ್ರಗಳಾಗಿವೆ. ಕೆಲವು ಕವನಗಳನ್ನು ಓದುವಾಗ ನಮ್ಮ ಮನಸ್ಸಿನ ಭಾವನೆಯನ್ನೇ ಈ ಕವನದಲ್ಲಿ ಸೆರೆಹಿಡಿಯಲಾಗಿದೆ ಎಂಬಂತೆ ಭಾಸವಾಗುತ್ತದೆ. ಹೀಗೆ ಇಲ್ಲಿನ ಕವನಗಳು ದೈನಂದಿನ ಜೀವನದ ವಿಷಯಗಳನ್ನು ಬಿಂಬಿಸುವುದರಿಂದ ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ. ಎಂದು ಅನಿತಾ ಆನಂದ್‌ ಕುಲಕರ್ಣಿ ಮತ್ತು ರುಕ್ಕಿಣಿ ವಿ. ಕುಲಕರ್ಣಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್
(17 April 1973)

ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ  ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ),  Traffic is ...

READ MORE

Related Books