ಜೀಕಬೇಕು

Author : ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್

Pages 106
Published by: ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್

Synopsys

ಲೇಖಕ‌ ಡಾ. ಅನಿಲ್‌ಕುಮಾರ್‌ ಪಿ. ಗ್ರಾಮಪುರೋಹಿತ್ ಅವರ ಕವನ ಸಂಕಲನ ʻಜೀಕಬೇಕುʼ. ಪುಸ್ತಕದ ಮುನ್ನುಡಿಯಲ್ಲಿ  “ಚಿಂತನಶೀಲ ಅನಿಲ್ ಕುಮಾರ್ ಅವರ ಕವನಗಳಲ್ಲಿ ಭಾವಕ್ಕೆ ತಕ್ಕಂತೆ ಪದಗಳು ಸುಲಲಿತವಾಗಿ ಮೂಡಿ ಬಂದಿವೆ. ಲಯಾಗ್ವಿತವಾದ ನಡೆಯಲ್ಲಿ ಪ್ರಾಸ, ಒಳಪ್ರಾಸಗಳ ಜೋಡಣೆಯಿಂದ ಒಂದು ನಾದಮಯ ಶೈಲಿ ರೂಪುಗೊಂಡಿದೆ. ಅವರ ಕಾವ್ಯದಲ್ಲಿ ಆಲೋಚನೆಯೊಡನೆ ಪದಗಳು, 'ಸಹಜಕ್ಕೆ ಬೇಕಿಲ್ಲ ಹುಸಿಧ್ಯಾನ' ಎಂಬ ಬೇಂದ್ರೆ ನುಡಿಯಂತೆ ಅತಿ ಸಹಜವಾಗಿ ಹೊಮ್ಮಿ ಬಂದಿವೆ. ಅದು ಅವರ ಕಾವ್ಯ ಸಂಸ್ಕಾರದ ಫಲ ಎಂದು ಹೇಳಬಹುದು. ಅವರು ನಮ್ಮ ನಗರ ಜೀವನದ ಕೊರತೆಗಳನ್ನು, ಕೆಟ್ಟ ವ್ಯವಸ್ಥೆಯನ್ನು ಕಂಡು ಕ್ಷೋಭೆಗೊಂಡಿದ್ದಾರೆ. ಅದನ್ನು ಉತ್ತಮಪಡಿಸುವ ಸಾಧ್ಯತೆಗಳನ್ನು ಧ್ಯಾನಿಸುತ್ತಾ, ಯೋಗ್ಯ ಸಮಾಜ ಸೃಷ್ಟಿಗೆ ಆಶಿಸುತ್ತಾ, ಆದರ್ಶಪೂರ್ಣ ಕವನಗಳನ್ನು ರಚಿಸಿದ್ದಾರೆ. ಅವು ಸಹೃದಯರಲ್ಲಿ ಪ್ರತಿ ಸ್ಪಂದನವನ್ನುಂಟು ಮಾಡಿ ರಸಾನಂದಕ್ಕೊಯ್ಯುತ್ತವೆ” ಎಂದು ಹೇಳಲಾಗಿದೆ.

About the Author

ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್
(17 April 1973)

ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ  ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ),  Traffic is ...

READ MORE

Related Books