About the Author

ಅರಳುಮಲ್ಲಿಗೆ ಪಾರ್ಥಸಾರಥಿ (ಜನನ: 22 -03-1948) ಹರಿದಾಸ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅರಳು ಮಲ್ಲಿಗೆಯಲ್ಲಿ. ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು.

ಕೃತಿಗಳು: ವಿಷ್ಣು ಸಹಸ್ರನಾಮ (ಇಂಗ್ಲಿಷ್) ವಿಷ್ಣುಸಹಸ್ರನಾಮ (ಕನ್ನಡ) ಅರಳುಮಲ್ಲಿಗೆ ಅಮೃತ ನುಡಿಗಳು ಹರಿದಾಸರ 4500ಹಾಡುಗಳು ವಾದಿರಾಜ ಸಂಪುಟ ಶ್ರೀಪಾದರಾಜ ಸಂಪುಟ ವ್ಯಾಸರಾಜ ಸಂಪುಟ ಹರಿದಾಸ ಝೇಂಕಾರ ತರಂಗಿಣಿ ಪುರಂದರ ಸಂಪುಟ - 1 ಪುರಂದರ ಸಂಪುಟ - 2 ದಾಸ ಸಾಹಿತ್ಯ ವೈಭವ ಜನಪ್ರಿಯ ಭಜನ ಸಂಪುಟ ರಂಗ ವಿಠ್ಠಲ ದಾಸ ಸಾಹಿತ್ಯ ವಾಹಿನಿ ಸಿರಿ ಕೃಷ್ಣ ವೈಕುಂಠ ವರ್ಣನೆ ಮಧ್ವಾಚಾರ್ಯರು ಸಂಸ್ಕೃತಿ ಪುರುಷರು ಕಲಾ ಪುರುಷರು ಪ್ರಚಲಿತ ಕೃತಿ ವಿಮರ್ಶೆ ಸರ್ವಮೂಲ Principles of Management Principles of Marketing ಹೂವು ಹಾವು ತೀರ್ಥ ಯತಿಕುಲ ಚಕ್ರವರ್ತಿ ವಿಜ್ಞಾನನಿಧಿ ತೀರ್ಥರು ದಾಸ ಸಾಹಿತ್ಯ ವಾಹಿನಿ - ಸಂಭಾವನಾ ಗ್ರಂಥ ಮಹತ್ತಾಗಿ ಚಿಂತಿಸು - ಬೃಹತ್ತಾಗಿ ಸಾಧಿಸು (ಆತ್ಮಚರಿತ್ರೆ)

ಧ್ವನಿಸುರುಳಿಗಳು: ಭಗವದ್ಗೀತ, ಭಾಗವತ, ರಾಮಾಯಣ, ಗುರುರಾಘವೇಂದ್ರ ನಮನ, ವಾದಿರಾಜ ನಮನ, ಕನಕದಾಸ ನಮನ, ವಿಜಯದಾಸ ನಮನ, ಉಗಾಭೋಗಗಳು, ತುಳಸಿ ಮಹಾತ್ಮೆ, ಗಾಯತ್ರಿ ಮಹಾತ್ಮೆ, ಪುರಂದರ ನಮನ, Powerful Personality Development, Values and Meditation: Secrets of Super Success, Vishnusahasranama (English), ವಿಷ್ಣುಸಹಸ್ರನಾಮ (ಕನ್ನಡ)

ಪ್ರಶಸ್ತಿ-ಗೌರವಗಳು: 'ವಿದ್ಯಾವಾಚಸ್ಪತಿ', 'ದಾಸ ಸಾಹಿತ್ಯ ಪ್ರದ್ಯುಮ್ನ' ಬಿರುದು ಗೌರವಗಳು, ಕರ್ನಾಟಕ ಸರ್ಕಾರದ ರಾಜ್ಯ, ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕಾದ ಹ್ಯೂಮನ್ ಸ್ಪಿರಿಚುಅಲ್ ವ್ಯಾಲ್ಯೂಸ್ ಗೌರವ, ಅಮೆರಿಕಾದ ವಿಜನರಿ ಆಫ್ ಏಶಿಯಾ ಗೌರವ, ಅಮೆರಿಕಾದ ಗ್ಲೋಬಲ್ ಹೆರಿಟೇಜ್ ಗೌರವ, ಲಿವರ್ಪೂಲ್ ಇನ್ಸ್ಟಿಟ್ಯೂಟ್ ಆಫ್ ಓರಿಎಂಟಲ್ ಸ್ಟಡೀಜ್ (ಇಂಗ್ಲೆಂಡ್) ಗೌರ ಲಭಿಸಿವೆ. 

 

 

ಅರಳುಮಲ್ಲಿಗೆ ಪಾರ್ಥಸಾರಥಿ

(22 Mar 1948)