ಪುರಂದರ ಮಹಾಸಂಪುಟ

Author : ಅರಳುಮಲ್ಲಿಗೆ ಪಾರ್ಥಸಾರಥಿ

Pages 1255

₹ 800.00




Year of Publication: 2021
Published by: ಅರಳುಮಲ್ಲಿಗೆ ಪ್ರತಿಷ್ಠಾನ
Address: ಬೆಂಗಳೂರು - 560085

Synopsys

‘ಪುರಂದರ ಮಹಾಸಂಪುಟ’ ಅರಳುಮಲ್ಲಿಗೆ ಪಾರ್ಥಸಾರತಿ ಅವರ ಕೃತಿ. ಶತಮಾನಗಳ ಕಾಲ ತಮ್ಮ ಅಪೂರ್ವ ಗೀತಸಂಗೀತದ ಮೂಲಕ ಕರ್ನಾಟಕದ ಉದ್ದಗಲಕ್ಕೂ ಗಾಳಿಗಂಧವಾಗಿ ಹರಡಿಕೊಂಡವರು ಪುರಂದರದಾಸರು, ಕನ್ನಡ ದಾಸಸಾಹಿತ್ಯಗಂಗೆ ಪುರಂದರದಾಸರಿಂದ ಭಕ್ತಿಭಾಗೀರಥಿ ಯೆನಿಸಿತು. ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರು, ದಾಸರು, ತಂಬೂರಿ ಮೀಟಿದರು, ಭವಾಬ್ದಿ ದಾಟಿದರು. ಗೆಜ್ಜೆಯ ಕಟ್ಟಿದರು. ಲಜ್ಜೆಯ ಅಟ್ಟಿದರು. ಅರಿಷಡ್ವರ್ಗಗಳನ್ನು ಕಟ್ಟಿದರು. ವೈಕುಂಠದ ಬಾಗಿಲು ತಟ್ಟಿದರು. ಗಾಯನ ಪಾಡಿದರು. ಹರಿಮೂರ್ತಿ ನೋಡಿದರು, ಪುರಂದರದಾಸರ ತಲೆಯಲ್ಲಿ ಸುಳಿದದ್ದು ಸುಳಾದಿಯಾಯಿತು. ಉಂಡು ಉಟ್ಟು ಉಸಿರಾಡಿದ್ದು ಉಗಾಭೋಗವಾಯಿತು. ಅವರ ಹಾಡುಗಳು ಗಂಧರ್ವಗಾನಕ್ಕೆ ಹೇಳಿ ಮಾಡಿಸಿದಂತಿವೆ. ಭಕ್ತಿಭಾಗೀರಥಿಯನ್ನು ತಮ್ಮ ಹಾಡುಗಳ ಮೂಲಕ ಅವರು ಜನಸಾಮಾನ್ಯರ ಮನೆಬಾಗಿಲಿಗೆ ಹರಿಸಿದರು. ಆ ಮೂಲಕ ಜನರ ಅನುಭವದಿಗಂತಗಳನ್ನು ವಿಸ್ತರಿಸಿದರು. ತಮ್ಮ ಒಂದೊಂದು ಹಾಡನ್ನೂ ಮಂತ್ರಸಿದ್ದಿಯ ಮಹಾನ್ ಗೀತಸಂಗೀತವನ್ನಾಗಿ ಮಾಡಿ ಶತಶತಮಾನಗಳವರೆಗೆ ಅವನ್ನು ಅಮೃತವಾಹಿನಿಯಂತೆ ಅವರು ಹರಿಯಬಿಟ್ಟರು. ಹರಿದಾಸಸಾಹಿತ್ಯ ನಂದಾದೀಪದ ಸಮುಚ್ಚಲನೆಗೆ ದೀಕ್ಷಾಬದ್ದರಾಗಿ ಐದು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡವರು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಅರವತ್ತೆಂಟಕ್ಕೂ ಹೆಚ್ಚು ಗ್ರಂಥಗಳನ್ನು ದಾಸಸಾಹಿತ್ಯದ ದಾರಿದೀಪಗಳಾಗಿ ನೀಡಿರುವ ಅರಳುಮಲ್ಲಿಗೆಯವರ ಹರಿದಾಸಸೇವೆ ಬೆಲೆ ಕಟ್ಟಲಾಗದ ಕೊಡುಗೆ. ಪಾರ್ಥಸಾರಥಿವಿಠಲದಾಸ ಅಂಕಿತದಲ್ಲಿ ರಚಿಸಿರುವ ಅವರ ಸಹಸ್ರಾರು ಕೀರ್ತನೆಗಳು ಆಧುನಿಕ ದಾಸಸಾಹಿತ್ಯ ವಾಹಿನಿಗೆ ಮಹತ್ವದ ಸೇರ್ಪಡೆಯೆಂದೇ ಪರಿಗಣಿತವಾಗಿದೆ.

About the Author

ಅರಳುಮಲ್ಲಿಗೆ ಪಾರ್ಥಸಾರಥಿ
(22 March 1948)

ಅರಳುಮಲ್ಲಿಗೆ ಪಾರ್ಥಸಾರಥಿ (ಜನನ: 22 -03-1948) ಹರಿದಾಸ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅರಳು ಮಲ್ಲಿಗೆಯಲ್ಲಿ. ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು. ಕೃತಿಗಳು: ವಿಷ್ಣು ಸಹಸ್ರನಾಮ (ಇಂಗ್ಲಿಷ್) ವಿಷ್ಣುಸಹಸ್ರನಾಮ (ಕನ್ನಡ) ಅರಳುಮಲ್ಲಿಗೆ ಅಮೃತ ನುಡಿಗಳು ಹರಿದಾಸರ 4500ಹಾಡುಗಳು ವಾದಿರಾಜ ಸಂಪುಟ ಶ್ರೀಪಾದರಾಜ ಸಂಪುಟ ವ್ಯಾಸರಾಜ ಸಂಪುಟ ಹರಿದಾಸ ಝೇಂಕಾರ ತರಂಗಿಣಿ ಪುರಂದರ ...

READ MORE

Related Books