ಪುರಂದರ ದಾಸರ ಸಾವಿರಾರು ಹಾಡುಗಳು

Author : ಅರಳುಮಲ್ಲಿಗೆ ಪಾರ್ಥಸಾರಥಿ

Pages 538

₹ 225.00




Year of Publication: 2016
Published by: ಓಂಕಾರ್ ಪ್ರಕಾಶನ,
Address: ನಾಗರಬಾವಿ ಮುಖ್ಯ ರಸ್ತೆ, ಅಮರಜ್ಯೋತಿ ನಗರ, ಬಿಡಿಎ ಸಂಕೀರ್ಣ ಸಮೀಪ, ವಿಜಯನಗರ, ಬೆಂಗಳೂರು-560040,
Phone: 081475 84835

Synopsys

ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿ ಅವರು ಪುರಂದರ ದಾಸರ ಹಾಡುಗಳನ್ನು ಸಂಪಾದಿಸಿದ ಕೃತಿ. ಪುರಂದರ ದಾಸರು ದಾಸರಲ್ಲಿಯೇ ಶ್ರೇಷ್ಠರು ಎಂದು ಪರಿಗಣಿಸಲಾಗುತ್ತಿದೆ. ಸಾವಿರಾರು ಹಾಡುಗಳನ್ನು ಅವರು ರಚಿಸಿದ್ದು, ಭಕ್ತಿ ಪ್ರಧಾನವಾಗಿವೆ. ಸಮಾಜ ಸುಧಾರಣೆಯ ಅಂಶಗಳನ್ನು ಹೊಂದಿವೆ. ದೇವರ ನೈಜ ಅಸ್ತಿತ್ವವನ್ನು ತೋರಿಸುವುದಲ್ಲದೇ, ಭಕ್ತಿಯ ಸ್ವರೂಪವನ್ನೂ ಸಹ ಮನವರಿಕೆ ಮಾಡಿಕೊಡುತ್ತವೆ. ದಾಸರ ಬದುಕು-ಬಾಲ್ಯ-ಅವರ ವಿಚಾರ-ಭಾವನೆ-ಸಾಮಾಜಿಕ ಕೊಡುಗೆಗಳ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳೀಗೆ ಹಾಗೂ ದಾಸ ಸಾಹಿತ್ಯ ಆಸಕ್ತರಿಗೆ ಈ ಕೃತಿ ಅತ್ಯಂತ ಉಪಯುಕ್ತವಾಗಿದೆ.  

About the Author

ಅರಳುಮಲ್ಲಿಗೆ ಪಾರ್ಥಸಾರಥಿ
(22 March 1948)

ಅರಳುಮಲ್ಲಿಗೆ ಪಾರ್ಥಸಾರಥಿ (ಜನನ: 22 -03-1948) ಹರಿದಾಸ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅರಳು ಮಲ್ಲಿಗೆಯಲ್ಲಿ. ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು. ಕೃತಿಗಳು: ವಿಷ್ಣು ಸಹಸ್ರನಾಮ (ಇಂಗ್ಲಿಷ್) ವಿಷ್ಣುಸಹಸ್ರನಾಮ (ಕನ್ನಡ) ಅರಳುಮಲ್ಲಿಗೆ ಅಮೃತ ನುಡಿಗಳು ಹರಿದಾಸರ 4500ಹಾಡುಗಳು ವಾದಿರಾಜ ಸಂಪುಟ ಶ್ರೀಪಾದರಾಜ ಸಂಪುಟ ವ್ಯಾಸರಾಜ ಸಂಪುಟ ಹರಿದಾಸ ಝೇಂಕಾರ ತರಂಗಿಣಿ ಪುರಂದರ ...

READ MORE

Related Books