About the Author

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. 

ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು. 

ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ಸಂಕಲನಗಳಿಗೆ ಭಾರತ ಸರ್ಕಾರದ ಬಹುಮಾನ, ಇಲ್ಲಿ ಸಲ್ಲುವರು ವಚನ ವಿಮರ್ಶೆಗೆ ಕಾವ್ಯಾನಂದ ಪುರಸ್ಕಾರ, ರಾಜ್ಯ ಸರಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಎಸ್‌.ಎನ್‌. ಭೂಸನೂರಮಠ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 

ತಾಜಮಹಲ್, ನೆಲ ಸಂಪಿಗೆ, ಬಹುಮಾನ, ಗೃಹ ಪಂಚಮಿ (ಶಿಶುಸಾಹಿತ್ಯ), ಗುಲಾಬಿ ಗೊಂಚಲು, ಜಿಲೇಬಿ ಝಣ್‌ ಝಣ್‌, ಧೃವ ಬಿಂದು, ಇಲ್ಲಿ ಸಲ್ಲುವರು, ವಿಜಯ ದುಂದುಭಿ (ಸಂಪಾದನೆ), ನೀರಿಲ್ಲದ ನಲ್ಲಿ (ಸಣ್ಣಕಥೆ), ಬಂದೆಯಾ ಬಾರಾಯಾ (ನಾಟಕ), ಗುರುಶಿಷ್ಯರ ಜೋಕುಗಳು ಇವರ ಪ್ರಮುಖ ಕೃತಿಗಳು. ಇವರು 2016 ಮಾರ್ಚ್‌ 31ರಂದು ನಿಧನರಾದರು. 

ಬಿ.ಎ. ಸನದಿ

(18 Aug 1933-31 Mar 2019)