ಬುರ್ಖಾದ ಹುಡುಗಿ

Author : ಬಿ.ಎ. ಸನದಿ

Pages 140

₹ 60.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560097
Phone: 121 - 23183311, 23183312

Synopsys

15 ಕಥೆಗಳಿರುವ ’ಬುರ್ಖಾದ ಹುಡುಗಿ’  ಎಂಬ ಕೃತಿಯಲ್ಲಿ ಅರಬ್ಬೀ ಕಥೆಗಳ ಕನ್ನಡ ಅನುವಾದವಾಗಿದೆ. ಬಿ.ಎ. ಸನದಿ ಅವರು ಕನ್ನಡಕ್ಕೆ  ಅನುವಾದ ಮಾಡಿದ್ದಾರೆ. ಮುಖಮುಚ್ಚಿದ ಕಪ್ಪುಬಟ್ಟೆಯ ಹಿಂದೆ ಅಡಗಿರುವ, ಬಡತನ ಸಿರಿತನಗಳ ಮುಗ್ಧಮನಸ್ಸಿನ ತುಡಿತಗಳನ್ನೊಳಗೊಂಡ, ಪುರುಷನಿಂದ ವಂಚಿತಳಾಗಿ ಪರಿತಪಿಸುವ ಹೆಣ್ಣಿನ ಮಾನಸಿಕ ತುಮುಲವನ್ನು  ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಕಟ್ಟುಕಥೆಯೊಂದರ ಪೊಳ್ಳುತನ ಭೇದಿಸಿ ಸಿಡಿದೆದ್ದ ಸ್ತ್ರೀಯೊಬ್ಬಳ ಸಾಹಸ, ಯುದ್ಧದ ವಾತಾವರಣದಲ್ಲಿ ಮುಪ್ಪಿನವರೂ ಮಕ್ಕಳೂ ಬದುಕಿನ ಮುಂದುವರಿಕೆಗಾಗಿ ತಡಬಡಿಸುವ, ಅರಬ್ ಸಂಸ್ಕೃತಿಯ ಕಟ್ಟುಪಾಡುಗಳ ಮುರಿದು ಅದರ ಆಚೆಗಿರುವ ಮನುಷ್ಯತ್ವದ ಮಿಡಿತ ತುಡಿತಗಳನ್ನು ಇಲ್ಲಿರುವ ಕಥೆಗಳು  ವಿವರಿಸುತ್ತದೆ. 

 

 

About the Author

ಬಿ.ಎ. ಸನದಿ
(18 August 1933 - 31 March 2019)

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು.  ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ...

READ MORE

Related Books