About the Author

ಡಾ.ಬಿ. ಎಂ. ಪುಟ್ಟಯ್ಯ ಅವರು ಎಂ.ಎ ಕನ್ನಡ ಪದವಿಯಲ್ಲಿ  ಪ್ರಥಮ ರ್‍ಯಾಂಕ್ ಪಡೆದು ಅಲಕ್ಷಿತ ವಚನಕಾರರ ಲೋಕದೃಷ್ಟಿ ಎಂಬ ವಿಷಯದ ಮೇಲೆ  ಎಂ. ಫಿಲ್ ಪದವಿ ಪಡೆದರು. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕ್ರತಿ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ  ಪಡೆದರು. ಪ್ರಸ್ತುತ ಕನ್ನಡ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ, ಸಂಸ್ಕ್ರತಿ ಅಧ್ಯಯನ, ಶಿಕ್ಷಣ ಆರ್ಥಿಕತೆ ಹಾಗೂ ರಾಜಕೀಯ ಅಧ್ಯಯನಗಳು, ಹೋರಾಟ ಚಳುವಳಿ ಹಾಗೂ ಸಾಮಾಜಿಕ ಅಧ್ಯಯನಗಳು ಇವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ.  ಕನ್ನಡ ದಲಿತ ಸಾಹಿತ್ಯ ಮತ್ತು ಕರ್ನಾಟಕ ದಲಿತ ಹೋರಾಟಗಳು, 90 ರ ದಶಕದ ನಂತರದ ಕನ್ನಡ ಮಹಿಳಾ ಸಾಹಿತ್ಯ ಕರ್ನಾಟಕದ ಮಹಿಳಾ ಹೋರಾಟಗಳಲ್ಲಿ ಮಹಿಳಾ ಪ್ರತಿನಿಧೀಕರಣ, ಕನ್ನಡ ದಲಿತ ಸಾಹಿತ್ಯ ಮತ್ತು ಕರ್ನಾಟಕದ ದಲಿತ ಹೋರಾಟಗಳ ಮೇಲೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಭಾವ ಮತ್ತು ಪ್ರಸ್ತುತತೆ ಯುಜಿಸಿ ಪೂರ್ಣಗೊಳಿಸಿದ ಅನುದಾನದ ಸಂಶೋಧನ ಯೋಜನೆಗಳಾಗಿವೆ.. 

ಕರ್ನಾಟಕ ಕನ್ನಡಿ, ಸಾವಿನ ಆಚರಣೆಗಳು,  ಹೊಸ ತಲೆಮಾರಿನ ಸಾಹಿತ್ಯ, ದಲಿತ ಆತ್ಮಕತೆಗಳ ಅಧ್ಯಯನ, ಮೈಮೇಲೆ ಬರುವ ಗಣ ಮತ್ತು ಜಮೀನ್ದಾರಿ ವ್ಯವಸ್ಥೆ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ಪೂರ್ಣಗೊಳಿಸಿದ ಯೋಜನೆಗಳಾಗಿವೆ. ಆದಿಪುರಾಣ ಸಾಂಸ್ಕ್ರತಿಕ ಮುಖಾಮುಖಿ, ಧರ್ಮಾಮೃತ ಸಾಂಸ್ಕ್ರತಿಕ ಮುಖಾಮುಖಿ, ಕದಡು, ದಲಿತರು ಮತ್ತು ಭೂಮಿಯ ಪ್ರಶ್ನೆ  ಇವರ ಸಂಶೋಧನಾ ಕೃತಿಗಳು. ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಹಲವು ಪ್ರಬಂಧಗಳನ್ನು ಮಂಡಿಸಿದ್ದಾರೆ. ಚಿಕ್ಕಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು 2010, ಅಖಿಲ ಭಾರತ 73 ಕನ್ನಡ ಸಾಹಿತ್ಯ ಸಮ್ಮೇಳನ ಗದಗ 2009, ಎಚ್. ನರಸಿಂಹಯ್ಯ ಪ್ರಶಸ್ತಿ 2012 ಲಭಿಸಿವೆ. 

ಬಿ.ಎಂ. ಪುಟ್ಟಯ್ಯ

(01 Jun 1967)