ಶ್ರಮಭಾಷೆ

Author : ಬಿ.ಎಂ. ಪುಟ್ಟಯ್ಯ

Pages 172

₹ 120.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276

Synopsys

ಶ್ರಮವು ಎಲ್ಲ ಬಗೆಯ ಉತ್ಪಾದನೆಯ ಮೂಲ. ಅದು ದೈಹಿಕ ಇಲ್ಲವೇ ಮಾನಸಿಕ ಶ್ರಮವೂ ಆಗಿರಬಹುದು. ಶ್ರಮವಿಲ್ಲದೇ ಮನುಷ್ಯ ಬದುಕುವುದು ಅಸಾಧ್ಯ. ಶ್ರಮದ ವಿಕಾಸವೇ ಮಾನವ ಚರಿತ್ರೆಯ ವಿಕಾಸವೂ ಆಗಿದೆ. ಶ್ರಮಿಕ ವರ್ಗ ಹಾಗೂ ಶ್ರಮವನ್ನು ನಿರ್ದೇಶಿಸುವ ವರ್ಗದ ಮಧ್ಯೆ ಸಂಘರ್ಷಗಳು ಇತಿಹಾಸದ ತುಂಬ ಕಾಣ ಸಿಗುತ್ತವೆ. ಶ್ರಮಭಾಷೆಯ ನೆಲೆಯಿಂದ ಸಾಹಿತ್ಯ-ಸಮಾಜ ಹಾಗೂ ಸಂಸ್ಕೃತಿಯನ್ನು ಕೃತಿಯಲ್ಲಿ ವಿಶ್ಲೇಷಿಸಿದ್ದು, ನೂತನ ಚಿಂತನೆಯನ್ನು ಪ್ರೇರೇಪಿಸುತ್ತದೆ.

About the Author

ಬಿ.ಎಂ. ಪುಟ್ಟಯ್ಯ
(01 June 1967)

ಡಾ.ಬಿ. ಎಂ. ಪುಟ್ಟಯ್ಯ ಅವರು ಎಂ.ಎ ಕನ್ನಡ ಪದವಿಯಲ್ಲಿ  ಪ್ರಥಮ ರ್‍ಯಾಂಕ್ ಪಡೆದು ಅಲಕ್ಷಿತ ವಚನಕಾರರ ಲೋಕದೃಷ್ಟಿ ಎಂಬ ವಿಷಯದ ಮೇಲೆ  ಎಂ. ಫಿಲ್ ಪದವಿ ಪಡೆದರು. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕ್ರತಿ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ  ಪಡೆದರು. ಪ್ರಸ್ತುತ ಕನ್ನಡ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ, ಸಂಸ್ಕ್ರತಿ ಅಧ್ಯಯನ, ಶಿಕ್ಷಣ ಆರ್ಥಿಕತೆ ಹಾಗೂ ರಾಜಕೀಯ ಅಧ್ಯಯನಗಳು, ಹೋರಾಟ ಚಳುವಳಿ ಹಾಗೂ ...

READ MORE

Related Books