About the Author

ಡಾ.ಬಿ.ಎಸ್.ತಲ್ದಾಡಿ ಅವರು ಮೂಲತಃ ಮೈಸೂರು ಜಿಲ್ಲೆಯ ಚಾಮರಾಜನಗರದ ಬಳಿಯ ಮಲೆ ಮಹದೇಶ್ವರದವರು. ಮಲೆಮಹದೇಶ್ವರ ಸೇರಿದಂತೆ ಒಳಗಿರಂಗನ ಬೆಟ್ಟಗಳ ಪರಿಸರದ ಕಾಡು ಕಣಿವೆ. ಗುಡ್ಡ ಸುತ್ತಾಡಿ, ಸೋಲಿಗರು, ಬಡಗರು. ಲಂಬಾಣಿಗರು, ಕಾಡಾರರು ಕಾಡುಕುರುಬರು ಹೀಗೆ ಸಹಜವಾಗಿ ಬೆರೆತು ಅವರ ಬದುಕಿನ ವಿವಿಧ ಮಗ್ಗಲುಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿದವರು. ಸೋಲಿಗರ ಸಮಗ್ರ ಜೀವನದ ‘ಗುಂಗರು ಕಣಿವೆ ’ (1982) ಕಾದಂಬರಿ ರಚಿಸಿದ್ದಾರೆ. ಕಥೆ-ಕವನ, ವಿಮರ್ಶೆ, ಜೀವನ ಚರಿತ್ರೆ ಇತ್ಯಾದಿ ಪ್ರಕಾರದಲ್ಲೂ ಲೇಖನಗಳನ್ನು ಬರೆದಿದ್ದಾರೆ. 

ಬಿ.ಎಸ್. ತಲ್ವಾಡಿ