About the Author

ಲೇಖಕ ಬಾಪು ಗ. ಖಾಡೆ ಅವರು ಮೂಲತಃ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿಯವರು. ಸದ್ಯ ಮುಧೋಳದಲ್ಲಿ ನೆಲೆಸಿದ್ದು, ಮಕ್ಕಳ ಸಾಹಿತ್ಯ ರಚನೆಯಲ್ಲಿ  ಆಸಕ್ತಿ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಕೆಲವು ಕಾಲ ಉಪನ್ಯಾಸಕರಾಗಿದ್ದರು. ಅವರ ಕವಿತೆಗಳು ಆಕಾಶವಾಣಿ ಧಾರವಾಡ, ಬೆಂಗಳೂರು ನಿಲಯಗಳಿಂದ ಪ್ರಸಾರವಾಗಿವೆ. 2017ರಲ್ಲಿ ಧಾರವಾಡದ ಚಿಲಿಪಿಲಿ ಪ್ರಕಾಶನದ ಮೂಲಕ ‘ಮಕ್ಕಳ ಜಾತ್ರೆ ’(ಕವಿತಾ ಸಂಕಲನ) ಹಾಗೂ 2020ರಲ್ಲಿ ‘ಚಿಣ್ಣರ ಚೈತ್ರ ’ (ಮಕ್ಕಳ ಕವಿತಾ ಸಂಕಲನ) ಪ್ರಕಟವಾಗಿದೆ. ‘ಮಕ್ಕಳ ಜಾತ್ರೆ’ಗೆ 2017ನೇ ಸಾಲಿನ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ ಲಭಿಸಿದೆ. 

ಬಾಪು ಗ. ಖಾಡೆ

(28 Dec 1972)