About the Author

ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು. 

1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು.

Urbanisation & Industrialisation in Karnataka, History and Culture of Medieval Karnataka. ರೈತ ಮತ್ತು ಆದಿವಾಸಿ ಚಳವಳಿ, ಪಾಳಿ ಭಾಷೆ ಮತ್ತು ಸಾಹಿತ್ಯದ ಇತಿಹಾಸ(ಅನುವಾದ ಕೃತಿ), ಭಾರತ ಮತ್ತು ಪಾಕಿಸ್ತಾನ-ಕಾಶ್ಮೀರ, ಭಗವದ್ಗೀತೆ-ವೈಚಾರಿಕ ಚಿಂತನೆ(ಸಂ), ಭಾರತದ ನಗರೀಕರಣ, ವಸಾಹತು ಕೃಷಿನಗರ, ವಿಶೇಷ ಆರ್ಥಿಕವಲಯ, ‘ಸಂಶೋಧನಾ ಪ್ರಬಂಧಗಳು ಮತ್ತು ಬೋಧನೆ’  ಪ್ರಮುಖ ಕೃತಿಗಳು. 

ಭಾರತ ಜ್ಞಾನ ವಿಜ್ಞಾನ ಸಮಿತಿಯ ಬೆಂಗಳೂರಿನ ಕೇಂದ್ರದಲ್ಲಿ ಉಪಾಧ್ಯಕ್ಷರು, ಮತ್ತು ಅರಿವು ಬಳಗದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಮತ್ತು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕ ಸಂಘದ ಕಛೇರಿ ಕಾರ್ಯದರ್ಶಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘದ ಉಪಾಧ್ಯಕ್ಷರಾಗಿ ಮತ್ತು ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಪರಿಶಿಷ್ಟ ಜಾತಿ ವರ್ಗದ ಉಪಾಧ್ಯಕ್ಷರಾಗಿದ್ದಾರೆ. ಅವರ ‘ಡಾ. ಬಿ.ಆರ್. ಅಂಬೇಡ್ಕರ್ ಮಹಾಮಾನವನ ಮಹಾಯಾನ’ ಕೃತಿಗೆ 2019ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಪ್ರಶಸ್ತಿ ಲಭಿಸಿದೆ. 

ಸಿ. ಚಂದ್ರಪ್ಪ