ಡಾ. ಬಿ.ಆರ್. ಅಂಬೇಡ್ಕರ್ ಮಹಾಮಾನವನ ಮಹಾಯಾನ

Author : ಸಿ. ಚಂದ್ರಪ್ಪ

Pages 790

₹ 1500.00




Year of Publication: 2019
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

‘ಡಾ. ಬಿ.ಆರ್. ಅಂಬೇಡ್ಕರ್ ಮಹಾಮಾನವನ ಮಹಾಯಾನ’ ಲೇಖಕ ಸಿ.ಚಂದ್ರಪ್ಪ ಅವರ ಕೃತಿ. ಈ ಕೃತಿಗೆ 2019ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಬಹುಮಾನ ಲಭಿಸಿದೆ. ಒಟ್ಟು 35 ಅಧ್ಯಾಯಗಳಿವೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಸಮಗ್ರ ಮಾಹಿತಿಯನ್ನು ಈ ಕೃತಿ ನೀಡುತ್ತದೆ. ಅಂಬೇಡ್ಕರ್ ಹೆಜ್ಜೆ ಗುರುತುಗಳನ್ನು, ಅವರ ಜೀವನಯಾನದ ಪ್ರತಿ ಘಟನೆಯನ್ನೂ ಕಾಲಾನುಕ್ರಮದಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಬಳಕೆ ಮಾಡಿರುವ ಸಂದರ್ಭೋಚಿತ ಚಿತ್ರಗಳು ಕೃತಿಗೆ ಅಂದ ತಂದುಕೊಟ್ಟಿವೆ.

ಸರಳ ಭಾಷೆ, ಆಕರ್ಷಕ ನಿರೂಪಣೆಯಿಂದ ಕೃತಿ ಸರಾಗವಾಗಿ ಓದಿಸಿಕೊಳ್ಳುತ್ತವೆ. ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಕೃತಿ. ಪ್ರಮುಖ ಸಂದರ್ಭಗಳಲ್ಲಿ ಅಂಬೇಡ್ಕರ್ ಅವರ ಪ್ರತಿಕ್ರಿಯೆ ಪ್ರತಿಸ್ಪಂದನೆ, ಸಮರ್ಥನೆಗಳು ಈ ಕೃತಿಯಲ್ಲಿ ಯಥಾವತ್ತಾಗಿ ದಾಖಲುಗೊಂಡಿದೆ. ಆದರೆ ಗಾಂಧೀಜಿಯವರ ಹತ್ಯೆಯಾದಾಗಿನ ಅಂಬೇಡ್ಕರ್ ಪ್ರತಿಕ್ರಿಯೆಯ ವಿವರಗಳಿಲ್ಲದಿರುವುದು ಕುತೂಹಲಕಾರಿಯಾಗಿದೆ ಎಂದು ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

About the Author

ಸಿ. ಚಂದ್ರಪ್ಪ

ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು.  1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. Urbanisation & Industrialisation in Karnataka, History and ...

READ MORE

Related Books