About the Author

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ (ಜನನ: 01-06-1968) ಸಿಎಸ್.ಮಾಲಿಪಾಟೀಲ (ಚನ್ನಪ್ಪಗೌಡ)ಎಂ.ಎಫ್ ಎ, ಎಂ.ಎ (ಇತಿಹಾಸ) , ಎಂ.ಇಡಿ ಹಾಗೂ ಎಂಫಿಲ್ ಪದವೀಧರರು. ಕರ್ನಾಟಕ ಸರ್ಕಾರದ ಬೋರ್ಡ್ ಪರೀಕ್ಷೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೀನಿಯರ್ ಗ್ರೇಡ್ ಉತ್ತೀರ್ಣರಾಗಿದ್ದಾರೆ. 

ಅಫಜಲಪುರದ ಮ.ವಿ.ವ ಸಂಘದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರು, ನಂತರ, ಶ್ರೀ ರೇಷ್ಮೆ ಶಿಕ್ಷಣ ಸಂಸ್ಥೆಯ ಶ್ರೀ ಮುರುಘರಾಜೇಂದ್ರ ಸ್ಮಾಮೀಜಿ ಬಿ.ಇಡಿ ಹಾಗೂ ಡಿ.ಇಡಿ ಕಾಲೇಜಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 2011-12 ರಲ್ಲಿ ‘ನೆನಪು’ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. 2012-13 ರಲ್ಲಿ ಜ್ಞಾನಶ್ರೀ ಕನ್ನಡ ಪ್ರಾಥಮಿಕ ಶಾಲೆ ಆರಂಭಿಸಿದ್ದಾರೆ.

2008ರಲ್ಲಿ ಇವರ ಮೊದಲ ಕವನ ಸಂಕಲನ-ನೆನಪು’ ಬಿಡುಗಡೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕು  ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಲ್ಲೂ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಚಿತ್ರಕಲಾವಿದರೂ ಹೌದು. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕವನ-ಲೇಖನಗಳನ್ನು ಬರೆದಿದ್ದಾರೆ.

ಬೀದರ್ ನಲ್ಲಿ (2015) ಜರುಗಿದ ಬರೆಹಗಾರರು ಹಾಗೂ ಕಲಾವಿದರ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಜನಪದ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ನಾಡೋಜ ಡಾ. ಕಯ್ಯಾರು ಕಿಞ್ಙಣ್ಣ ರೈ ಅವರಿಂದ ಕಾಸರಗೋಡುನಲ್ಲಿ(2006-07) ಗಡಿ ನಾಡ ಕನ್ರಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಆಕಾಶವಾಣಿ ಹಾಗೂ ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ಹಲವಾರು ಕವಿತೆಗಳನ್ನುವಾಚಿಸಿದ್ದು, ಸಂದರ್ಶನಗಳನ್ನು ನೀಡಿದ್ದಾರೆ. 

ಸಿ.ಎಸ್. ಮಾಲಿಪಾಟೀಲ (ಚನ್ನಬಸಪ್ಪಗೌಡ)

(01 Jun 1968)

Books by Author