ನೆನಪು-ಸಿ.ಎಸ್. ಮಾಲೀಪಾಟೀಲ ಅವರು ಬರೆದ ಕವನ ಸಂಕಲನ.ದೇವರು, ಶರಣರು ಹಾಗೂ ಸಂತರು ಕುರಿತು, ಹಾಗೂ ತತ್ವಜ್ಞಾನಿಗಳು, ರಾಜಕಾರಣಿಗಳು , ಸಾಧಕರು ಮತ್ತು ಯುಗಾದಿ, ಕನ್ನಡ ನಾಡು, ಸ್ವತಂತ್ಯ್ರ ಭಾರತ ಹೀಗೆ ಮೂರು ಪ್ರಮುಖ ವಿಭಾಗಗಳಡಿ ಕವಿತೆಗಳನ್ನು ಬರೆದಿದ್ದಾರೆ.
‘ಕವಿಯು ಬೆಳೆದು ಬಂದ ಪರಿಸರ, ಆತನ ಅಧ್ಯಾತ್ಮಿಕ ಒಲವು-ನಿಲುವುಗಳು, ಪರಂಪರೆ, ಸೌಂದರ್ಯಾನುಭವವು ಕವಿಯ ಕಾವ್ಯವನ್ನು ಸೃಜಿಸುತ್ತದೆ ಎಂಬ ಮಾತು ಕವಿ ಸಿ.ಎಸ್.ಮಾಲಿಪಾಟೀಲ ಅವರ ಕವನಗಳಲ್ಲಿ ಕಾಣುತ್ತೇವೆ’ ಎಂದು ಸಾಹಿತಿ ರೇವಣಸಿದ್ದಯ್ಯ ರುದ್ರಸ್ವಾಮಿ ಮಠ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ (ಜನನ: 01-06-1968) ಸಿಎಸ್.ಮಾಲಿಪಾಟೀಲ (ಚನ್ನಪ್ಪಗೌಡ)ಎಂ.ಎಫ್ ಎ, ಎಂ.ಎ (ಇತಿಹಾಸ) , ಎಂ.ಇಡಿ ಹಾಗೂ ಎಂಫಿಲ್ ಪದವೀಧರರು. ಕರ್ನಾಟಕ ಸರ್ಕಾರದ ಬೋರ್ಡ್ ಪರೀಕ್ಷೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೀನಿಯರ್ ಗ್ರೇಡ್ ಉತ್ತೀರ್ಣರಾಗಿದ್ದಾರೆ. ಅಫಜಲಪುರದ ಮ.ವಿ.ವ ಸಂಘದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರು, ನಂತರ, ಶ್ರೀ ರೇಷ್ಮೆ ಶಿಕ್ಷಣ ಸಂಸ್ಥೆಯ ಶ್ರೀ ಮುರುಘರಾಜೇಂದ್ರ ಸ್ಮಾಮೀಜಿ ಬಿ.ಇಡಿ ಹಾಗೂ ಡಿ.ಇಡಿ ಕಾಲೇಜಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 2011-12 ರಲ್ಲಿ ‘ನೆನಪು’ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. 2012-13 ರಲ್ಲಿ ಜ್ಞಾನಶ್ರೀ ಕನ್ನಡ ಪ್ರಾಥಮಿಕ ಶಾಲೆ ಆರಂಭಿಸಿದ್ದಾರೆ. 2008ರಲ್ಲಿ ಇವರ ...
READ MORE