About the Author

ಲೇಖಕಿ ಸಿ.ಸುವರ್ಣ ಅವರು 1972 ಮಾರ್ಚ್ 23 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಜನಿಸಿದರು. ತಂದೆ-ಚಿಕ್ಕಯ್ಯ, ತಾಯಿ- ಇಂದಿರಾ. ಹಾಸನದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಅವರು ಹಾಸನವಾಣಿ ಹಾಗೂ ಜನತಾಮಾಧ್ಯಮ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರೆಕರ್ತೆಯಾಗಿ ಕಾರ್ಯನಿರ್ವಹಿಸಿದ ಇವರು ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ಇವರ ಕೃತಿಗಳು ‘ಬದುಕುಮಾಯೆ’ ಲೇಖನ ಸಂಗ್ರಹ, ‘ಚಾಕಣದ ಸುಭದ್ರೆ’ ನೀಳ್ಗತೆಗಳು 2018 ರಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಪ್ರಕಟವಾಗಿವೆ. ಜೊತೆಗೆ ‘ಒಂದ್ಕಥೆ’ ಎಂಬ ಕಾದಂಬರಿ 2019ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಪ್ರಕಟವಾಗಿದೆ. ಎಲ್ಲರ ಮೌನ ಅವಳ ಮೌನ ಕಾದಂಬರಿ ಹಾಗೂ ಸಣ್ಣ ಕಥೆಗಳ ಕಥಾಸಂಕಲನ ಮುದ್ರಣದ ಹಂತದಲ್ಲಿ ಇದೆ ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ.

ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)

(23 Mar 1972)