ಒಂದ್ಕಥೆ

Author : ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)

Pages 296

₹ 275.00




Year of Publication: 2019
Published by: ಅಭಿರುಚಿ ಪ್ರಕಾಶನ
Address: #386, 14ನೇ ಮುಖ್ಯರಸ್ತೆ, 3ನೇ ಕ್ರಾಸ್, ಸರಸ್ವತಿಪುರ, ಮೈಸೂರು- 9
Phone: 9980560013

Synopsys

‘ಒಂದ್ಕಥೆ’ ಲೇಖಕಿ ಸುವರ್ಣ ಶಿವಪ್ರಸಾದ್ ಅವರ ಕಾದಂಬರಿ. ದಲಿತ ಲೇಖಕರು ರೂಪಿಸಿರುವ ಸಾಹಿತ್ಯದ ವೈಚಾರಿಕತೆ ಸಹಜವಾಗಿಯೇ ಮೈಗೂಡಿಸಿಕೊಂಡಿರುವ ಲೇಖಕಿ ಸುವರ್ಣ, ಸ್ವತಃ ತನ್ನೊಡಲ ನುಡಿಯನ್ನೇ ನುಡಿಯಬಹುದಾದ ಕ್ರಮವನ್ನು ಅನುಸರಿಸಿದ್ದಾರೆ. ಈ ಕಾದಂಬರಿ ಹಳ್ಳಿ ಒಂದರ ಸಾಮಾನ್ಯ ಚಿತ್ರಣಗಳನ್ನೇ ಪ್ರತಿಬಿಂಬಿಸುತ್ತದೆ. ಈ ಒಂದ್ಕಥೆ ಶೀರ್ಷಿಕೆ ಸಾಂಕೇತಿಕವಾಗಿ ಇದೆಯಾದರೂ ಹಳ್ಳಿಯು ಮುಗ್ಧವಾಗಿ ವಿವರಗಳ ಮಾಲೆಯನ್ನು ಕಟ್ಟುತ್ತಾ ಸಾಗುತ್ತದೆ. ಎಪ್ಪತ್ತರ ದಶಕದ ಊಳಿಗಮಾನ್ಯ ವ್ಯವಸ್ಥೆಯ ಹಳ್ಳಿಗರ ದಲಿತರ ದಾರುಣ ಕಥೆಯನ್ನೇನು ಹೇಳದಿದ್ದರೂ, ತಮ್ಮ ಬಾಲ್ಯದಲ್ಲಿ ತಾನು ಕಂಡ ಊರು ಕೇರಿಯ ನೆನಪಿನ ಚಿತ್ರಗಳನ್ನು ಯಾವ ದೊಡ್ಡ ಉದ್ದೇಶಗಳಿದೇ ನಿರೂಪಿಸಿದ್ದಾರೆ.

About the Author

ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)
(23 March 1972)

ಲೇಖಕಿ ಸಿ.ಸುವರ್ಣ ಅವರು 1972 ಮಾರ್ಚ್ 23 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಜನಿಸಿದರು. ತಂದೆ-ಚಿಕ್ಕಯ್ಯ, ತಾಯಿ- ಇಂದಿರಾ. ಹಾಸನದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಅವರು ಹಾಸನವಾಣಿ ಹಾಗೂ ಜನತಾಮಾಧ್ಯಮ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರೆಕರ್ತೆಯಾಗಿ ಕಾರ್ಯನಿರ್ವಹಿಸಿದ ಇವರು ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ಇವರ ಕೃತಿಗಳು ‘ಬದುಕುಮಾಯೆ’ ಲೇಖನ ಸಂಗ್ರಹ, ‘ಚಾಕಣದ ಸುಭದ್ರೆ’ ನೀಳ್ಗತೆಗಳು 2018 ರಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಪ್ರಕಟವಾಗಿವೆ. ಜೊತೆಗೆ ‘ಒಂದ್ಕಥೆ’ ಎಂಬ ಕಾದಂಬರಿ 2019ರಲ್ಲಿ ಮೈಸೂರಿನ ಅಭಿರುಚಿ ...

READ MORE

Related Books