About the Author

ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ  ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್‌ ಪ್ರೈ ಲಿ. ನಲ್ಲಿ  ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು.

ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

’ಪುಟಾಣಿ ಕೆಂಪು ಶೂ’ ಹಾಗೂ ’ಚಂದ್ರನಿಗೆ ಟ್ಯಾಟೂ’ ಇವರ ಕವನ ಸಂಕಲನಗಳಾದರೆ ’ಹಿಮಗಿರಿಯಾನ’ ಪ್ರವಾಸ ಕಥನ. ನೀನಿಲ್ಲದೆ ನನಗೇನಿದೆ’ ಎಂಬ ಪ್ರಬಂಧ ಸಂಗ್ರಹ ಪ್ರಕಟವಾಗಿದೆ.

 

ಛಾಯಾ ಭಗವತಿ