ಅತಂತ್ರ – ಜೂಡ್‍

Author : ಛಾಯಾ ಭಗವತಿ

Pages 400




Published by: ಲೋಕ ಸಾಹಿತ್ಯ ಮಾಲಿಕೆ
Address: ಲೋಕ ಸಾಹಿತ್ಯ ಮಾಲಿಕೆ

Synopsys

ಪ್ರಖ್ಯಾತ ಆಂಗ್ಲ ಲೇಖಕ ಥಾಮಸ್‍ ಹಾರ್ಡಿ ಬರೆದ ‘ಜೂಡ್‍ – ದಿ ಅಬ್ಸ್‍ಕ್ಯೂರ್‍' ಎಂಬ ಪುಸ್ತಕದ ಸಂಗ್ರಹಾನುವಾದ ‘ಅತಂತ್ರ ಜೂಡ್‍'. ದುರಂತ ಕಥೆಗಳ ಸರದಾರ ಎಂದೇ ಕರೆಯಲ್ಪಡುವ ಥಾಮಸ್‍ ಹಾರ್ಡಿಯವರ ಕಥೆಗಳು ತುಂಬಾ ರೋಚಕ ಹಾಗೂ ಮನ ಮುಟ್ಟುವ ರೀತಿಯಲ್ಲಿ ನಿರೂಪಿತಗೊಂಡಿರುತ್ತವೆ. ಇಂತಹುದೇ ಒಂದು ಪುಸ್ತಕದ ಸಂಗ್ರಹಾನುವಾದ ಮಾಡಿರುವುದು ಛಾಯಾ ಭಗವತಯವರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಬಾಲಕನೊಬ್ಬ ಉತ್ತಮ ಜೀವನ ನಡೆಸುವ ಕನಸನ್ನು ಹೊಂದಿರುವ ಓರ್ವ ಹುಡುಗನೊಬ್ಬನ ಕಥೆ, ಕಾದಂಬರಿಯ ರೂಪದಲ್ಲಿ ಕನ್ನಡದಲ್ಲಿ ಈಗ ಲಭ್ಯವಿದೆ. ಉತ್ತಮ ಜೀವನ ಕಂಡುಕೊಳ್ಳುವ ಆಸೆಯಲ್ಲಿ ನಂಬಿಕೆ ಅಪನಂಬಿಕೆಗಳ ಅಡಕತ್ತರಿಯಲ್ಲಿ ಸಿಲುಕುತ್ತಾ, ಬದುಕಿನ ಮೋಸಕ್ಕೆ, ಸಂತೋಷಕ್ಕೆ ತನ್ನನ್ನು ತಾನೇ ಒಡ್ಡುತ್ತಾ ತನ್ನ ಜೀವನವನ್ನು ಕಟ್ಟಿಕೊಳ್ಳುವ ರೋಚಕ ಕಥೆ ಈ ಕಾದಂಬರಿಯಲ್ಲಿದೆ. ತನ್ನ ಜೀವನದ ಶಿಲ್ಪಿ ನಾನೆ, ನನ್ನ ಶ್ರಮ ಮತ್ತು ಇಚ್ಛಾಶಕ್ತಿಯೇ ತನ್ನ ಬಲ ಎಂದು ನಂಬಿಕೊಂಡು ಬದುಕಿದ ಓರ್ವ ಶಿಲ್ಪಿ ಈ ಕಥೆಯ ನಾಯಕ. ಕನ್ನಡ ಅನುವಾದ ಓದಿದ ಮೇಲೆ ಮೂಲ ಕೃತಿಯನ್ನೊಮ್ಮೆ ಓದಬೇಕೆಂಬ ಹಂಬಲ ಹುಟ್ಟಿಸುವ ಪುಸ್ತಕವಿದು. 400 ಪುಟಗಳಿದ್ದರೂ ಮೊದಲಿನಿಂದ ಕೊನೆಯವರೆಗೂ ಓದಿಸಿಕೊಂಡು ಹೋಗುವಂತಹ ಬರೆವಣಿಗೆ ಛಾಯಾ ಭಗವತಿಯವರದು.

About the Author

ಛಾಯಾ ಭಗವತಿ

ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ  ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್‌ ಪ್ರೈ ಲಿ. ನಲ್ಲಿ  ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ’ಪುಟಾಣಿ ...

READ MORE

Related Books