ಚಂದ್ರನಿಗೆ ಟ್ಯಾಟೂ

Author : ಛಾಯಾ ಭಗವತಿ

Pages 64

₹ 70.00
Year of Publication: 2015
Published by: ಆಹ್ವಾನ ಪ್ರಕಾಶನ
Address: ಬಸರಕೂಡು, ಹಗರಿಬೊಮ್ಮನಳ್ಳಿ, ಬಳ್ಳಾರಿ- 583224

Synopsys

‘ಚಂದ್ರನಿಗೆ ಟ್ಯಾಟೂ’ ಲೇಖಕಿ ಛಾಯಾ ಭಗವತಿ ಅವರು ರಚಿಸಿರುವ ಮಕ್ಕಳ ಕವಿತೆಗಳ ಸಂಕಲನ. ಈ ಕೃತಿಗೆ ಜಿ.ಪಿ. ಬಸವರಾಜು ಅವರ ಬೆನ್ನುಡಿ ಬರಹವಿದೆ. ಮಕ್ಕಳ ಪದ್ಯಗಳೆಂದರೆ ಮೊದಲು ಕಿವಿಗೆ ಹಿತವಾಗಿರಬೇಕು ನಾಲಗೆಯ ಮೇಲೆ ನಲಿದಾಡುವಂತಿರಬೇಕು. ಇಂಥ ಪದ್ಯಗಳನ್ನು, ಸಾಲುಗಳನ್ನು ಮಕ್ಕಳು ಕೇಳುತ್ತ, ಹೇಳುತ್ತ, ತಮ್ಮ ಅರಿವಿಗೆ ತಂದುಕೊಳ್ಳುವ ಮುನ್ನುವೇ ಎದೆಗೆ ಇಳಿಸಿಕೊಂಡು ಬಿಡುತ್ತಾರೆ. ಎದೆಗೆ ಇಳಿದ ಪದ್ಯಗಳು, ಅಲ್ಲಿಯೇ ಬಹಳ ಕಾಲ ಉಳಿದು, ನೆನೆದಾಗಲೆಲ್ಲಾ ನಾಲಗೆಯ ಮೇಲೆ ಕುಣಿದಾಡುತ್ತವೆ. ಛಾಯಾ ಭಗವತಿ ಅವರ ಈ ಪದ್ಯಗಳಲ್ಲಿ ಇಂಥ ಗುಣವಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಜಿ.ಪಿ. ಬಸವರಾಜು.

ಈ ಪದ್ಯಗಳಲ್ಲಿನ ಲಯ, ನಡೆ, ಏರಿಳಿತವು, ಪ್ರಾಸ, ಕಲ್ಪನೆಯ ವಿಲಾಸ ಎಲ್ಲವೂ ಮಕ್ಕಳನ್ನು ಥಟ್ಟನೆ ಸೆಳೆದುಕೊಂಡು ಗೆಳೆತನ ಬೆಳೆಸುತ್ತವೆ. ಮಕ್ಕಳು ಈ ಪದ್ಯಗಳನ್ನು, ಸಾಲುಗಳನ್ನು ಹೇಳಿ ಹೇಳಿ, ಹಾಡಿ ಹಾಡಿ ನಲಿಯಬಹುದು. ಸರಳತೆ ಎಂಬುದು ಕೇವಲ ಭಾಷೆಗೆ ಸಂಬಂಧಪಟ್ಟದ್ದಲ್ಲ:ಗ್ರಹಿಕೆ, ಅರ್ಥ, ಕಲ್ಪನೆಯ ಜೊತೆ ಬೆರೆತದ್ದೂ ಹೌದು ಎಂಬುದನ್ನು ಈ ಪದ್ಯಗಳು ನೆನಪಿಸುತ್ತವೆ. ಉಂಡೆ. ಚೆಕ್ಕುಲಿ, ಕವಡೆ, ವಡೆ. ಒಬ್ಬಟ್ಟು, ಕುಂಟೆ, ರಂಟೆ, ನೇಗಿಲು, ಕುರುಷಿ, ಹಾರೆ, ಸಲಿಕೆ ಹೀಗೆ ಗ್ರಾಮೀಣ ಬದುಕಿನ, ಸಂಸ್ಕೃತಿಯ ಜೊತೆ ತಳುಕು ಹಾಕಿಕೊಂಡಿರುವ ಈ ಪದ್ಯಗಳು ಹಳ್ಳಿಗಾಡಿನ ಮಕ್ಕಳಿಗೂ ಹಿತವಾಗುವಂತಿವೆ. ಮಕ್ಕಳ ಪದ್ಯಗಳು ಸರಳವಾಗಿ ಕಂಡರೂ, ಕವಿಗಳಿಗೆ ಇಂಥ ರಚನೆ ದೊಡ್ಡ ಸವಾಲು. ಈ ಸವಾಲನ್ನು ಛಾಯಾ ಸರಿಯಾಗಿ ಎದುರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಛಾಯಾ ಭಗವತಿ

ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ  ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್‌ ಪ್ರೈ ಲಿ. ನಲ್ಲಿ  ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ’ಪುಟಾಣಿ ...

READ MORE

Related Books