About the Author

ಚಿನ್ನಸ್ವಾಮಿ ವಡ್ಡಗೆರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ (1993-95) ಪಡೆದರು. ಕೆಲಕಾಲ ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ  ಕಾರ್ಯ ನಿರ್ವಹಿಸಿದರು.

ಪಿ.ಲಂಕೇಶ್‌ರ ಬರಹಗಳಿಂದ ಪ್ರಭಾವಿತರಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ, ಮೈಸೂರಿನ "ಆಂದೋಲನ ಮತ್ತು "ವಿಜಯ ಕರ್ನಾಟಕ' ದಿನಪತ್ರಿಕೆಗಳಲ್ಲಿ ದಶಕಗಳ ಕಾಲ ಹಿರಿಯ ಉಪಸಂಪಾದಕರಾಗಿ ಜವಾಬ್ದಾರಿ ನಿರ್ವಹಣೆಯನ್ನು ಮಾಡಿದರು. 

ಐದಾರು ವರ್ಷಗಳ ಕಾಲ ನಿರ್ದಿಷ್ಟ ಗುರಿ ಉದ್ದೇಶಗಳಿಲ್ಲದೆ ಅಲೆದಾಟ ನಡೆಸಿ ನಂತರ ಕೃಷಿಕರಾದರು.  ಕಾಡುಕೃಷಿ, ಒಣಭೂಮಿ ಬೇಸಾಯ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ವಿಶೇಷ ಆಸಕ್ತಿಯನ್ನು ತಳೆದರು. ಬಿಡುವಿನ ವೇಳೆಯಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ನಾಡಿನ ಉದ್ದಗಲಕ್ಕೂ ಕೃಷಿಪ್ರವಾಸ ಮಾಡುವುದು ಹವ್ಯಾಸ. ಕೃಷಿಸಾಧಕರ ಭೇಟಿ. "ಆಂದೋಲನ" ದಿನಪತ್ರಿಕೆಯಲ್ಲಿ 'ಬಂಗಾರದ ಮನುಷ್ಯ' ಅಂಕಣದ ಮೂಲಕ ಕೃಷಿ ಯಶೋಗಾಥೆಗಳ ಪರಿಚಯ. ಗ್ರಾಮೀಣ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಉಂಟುಮಾಡಲು, ಸುಸ್ಥಿರ ಸಮಗ್ರ ಬೇಸಾಯದ ಬಗ್ಗೆ ಅರಿವು ಮೂಡಿಸಿದರು. 

ಇವರ ಪ್ರಕಟಿತ ಕೃತಿಗಳು: 'ಪಾಪಣ್ಣ ವಿಜಯ', 'ಬಂಗಾರದ ಮನುಷ್ಯರು', 'ಕೃಷಿ ಸಂಸ್ಕೃತಿ ಕಥನ'.

ಚಿನ್ನಸ್ವಾಮಿ ವಡ್ಡಗೆರೆ