About the Author

ಪ್ರೊ. ಡಿ.ಅಂಜನಪ್ಪ ಚಳ್ಳಕೆರೆ  ಅವರು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣವನ್ನು ಪರಶುರಾಂಪುರದಲ್ಲಿ ಅಭ್ಯಸಿಸಿದರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಈಗ ಚಳ್ಳಕರಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ ನಿರ್ವಹಿಸುತ್ತಿದ್ದಾರೆ. ಕನ್ನಡದ ವಿಶಿಷ್ಟ ಓದುಗರಾಗಿರುವ ಅವರು ಈಗಾಗಲೇ ಇವರ ‘ಒಡಲ ಭಾಷೆ (2014), ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ, ಕಾರಣ ಮೀಮಾಂಸೆ (2017), ;ವಿಮರ್ಶೆಯ ವಿವೇಕ’ ಎಂಬ ನಾಲ್ಕು ಕೃತಿಗಳು ಪ್ರಕಟವಾಗಿವೆ. ವೈಚಾರಿಕತೆ ಮತ್ತು ವಿಮರ್ಶೆಯ ಲೇಖನಗಳನ್ನು ಈ ನಾಲ್ಕೂ ಕೃತಿಗಳು ಒಳಗೊಂಡಿವೆ. ಸೂಕ್ಷ್ಮ ಸಂವೇದನೆಯ ವಿಮರ್ಶಕರೆಂದು ಗುರುತಿಸಲಾಗಿದ್ದು, ಸಾಹಿತ್ಯ ಅಧ್ಯಯನ, ಭಾಷೆ, ವಿಮರ್ಶೆ, ವೈಚಾರಿಕತೆ ಮತ್ತು ಸಿನೆಮಾ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.

ಡಿ. ಅಂಜನಪ್ಪ ಚಳ್ಳಕೆರೆ