ವಿಮರ್ಶೆಯ ವಿವೇಕ

Author : ಡಿ. ಅಂಜನಪ್ಪ ಚಳ್ಳಕೆರೆ

Pages 276

₹ 220.00




Year of Publication: 2019
Published by: ವೀರ ಪಬ್ಲಿಷರ್‍ಸ್‌
Address: ವೀರಣ್ಣ ನಿವಾಸ, ಜಿ.ನಾಗತಿಹಳ್ಳಿ ಪೋಸ್ಟ್‌, ಬ್ಯಾಲದಕೆರೆ, ನಾಗಮಂಗಲ ತಾಲ್ಲೂಕು, ಮಂಡ್ಯ.

Synopsys

ಡಿ.ಅಂಜನಪ್ಪ ಚಳ್ಳಕೆರೆ ಅವರ ವಿಮರ್ಶೆಯ ವಿವೇಕ ಕೃತಿಯು ವಿಮರ್ಶಾ ದೃಷ್ಟಿಕೋನದ ಕುರಿತು ವಿವರಿಸುವ ಕೃತಿಯಾಗಿದೆ. ಲೇಖಕರು ಈ ಕೃತಿಯಲ್ಲಿ ದಲಿತ ದೃಷ್ಟಿಕೋನದ ಸೂಕ್ಷ್ಮ ಒಳನೋಟಗಳು ವಿಮರ್ಶೆಗೆ ಹೊಸ ಆಯಾಮವನ್ನೇ ನೀಡುವುದರೊಂದಿಗೆ ಸಾಮಾನ್ಯ ನೋಟಕ್ಕೆ ದಕ್ಕದ ವಿವರಗಳ 'ದರ್ಶನ' ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಯ ಹೆಸರಿನ ಸುರ್ದೀಘ ಲೇಖನದಲ್ಲಿ ವಿಮರ್ಶೆಯ ತಾತ್ವಿಕತೆಯನ್ನು ವಚನಕಾರರು ಮತ್ತು ದೇವರಾಜ ಅರಸು ತಂದ ಸಾಮಾಜಿಕ ಬದಲಾವಣೆಯ ಹಿನ್ನೆಲೆಯಲ್ಲಿ ನಿರ್ವಚಿ ಸಿರುವುದರಿಂದ ಅದಕ್ಕೆ ಭಿನ್ನ ಆಯಾಮ ದಕ್ಕಿದೆ. ಭಾಷೆ ವಿವಿಧ ಸಂದರ್ಭಗಳಲ್ಲಿ ಪಡೆದುಕೊಳ್ಳುವ ಅರ್ಥ ಪಾತಳಿಗಳ ವಿವೇಚನೆ ಒಂದು ಹೊಸ ಆಲೋಚನಾ ಕ್ರಮವನ್ನೇ ತೆರೆಯುತ್ತದೆ. 

About the Author

ಡಿ. ಅಂಜನಪ್ಪ ಚಳ್ಳಕೆರೆ

ಪ್ರೊ. ಡಿ.ಅಂಜನಪ್ಪ ಚಳ್ಳಕೆರೆ  ಅವರು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣವನ್ನು ಪರಶುರಾಂಪುರದಲ್ಲಿ ಅಭ್ಯಸಿಸಿದರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಈಗ ಚಳ್ಳಕರಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ ನಿರ್ವಹಿಸುತ್ತಿದ್ದಾರೆ. ಕನ್ನಡದ ವಿಶಿಷ್ಟ ಓದುಗರಾಗಿರುವ ಅವರು ಈಗಾಗಲೇ ಇವರ ‘ಒಡಲ ಭಾಷೆ (2014), ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ, ಕಾರಣ ಮೀಮಾಂಸೆ (2017), ;ವಿಮರ್ಶೆಯ ವಿವೇಕ’ ಎಂಬ ನಾಲ್ಕು ಕೃತಿಗಳು ಪ್ರಕಟವಾಗಿವೆ. ...

READ MORE

Related Books